ಕಡಲೆಕಾಯಿ ಗಂಟಲಲ್ಲಿ ಸಿಲುಕಿ ಮೂರು ವರ್ಷದ ಬಾಲಕ ದಾರುಣ ಸಾವು – vishwanews24

Featured, ರಾಷ್ಟ್ರ ನ್ಯೂಸ್

ಕಡಲೆಕಾಯಿ ಗಂಟಲಲ್ಲಿ ಸಿಲುಕಿ ಮೂರು ವರ್ಷದ ಬಾಲಕ ದಾರುಣ ಸಾವು

ಮಲಪ್ಪುರಂ: ಮಿಕ್ಸ್‌ಚರ್ ತಿನ್ನುತ್ತಿದ್ದ ವೇಳೆ ಕಡಲೆಕಾಯಿ ಗಂಟಲಲ್ಲಿ ಸಿಲುಕಿದ ಪರಿಣಾಮ ಮೂರು ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಸೋಮವಾರ ವೆಂಗರಾ ಪ್ರದೇಶದ ಕುನ್ನುಂಪುರಂನಲ್ಲಿ ನಡೆದಿದೆ. ಬಾಲಕ ಮನೆಯಲ್ಲಿ ಮಿಕ್ಸ್‌ಚರ್ ತಿನ್ನುತ್ತಿದ್ದ ವೇಳೆ ಅದರಲ್ಲಿದ್ದ ಕಡಲೆಕಾಯಿ ಆಕಸ್ಮಿಕವಾಗಿ ಗಂಟಲಲ್ಲಿ ಸಿಲುಕಿದೆ. ಪರಿಣಾಮ ಬಾಲಕನಿಗೆ ಉಸಿರಾಡಲು ಕಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ರೋಹಿಣಿ ಸಿಂಧೂರಿ ನೇಮಕ – vishwanews24

ತಕ್ಷಣವೇ ಕುಟುಂಬದವರು ಬಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply