ಕನ್ನಡ ಭಾಷೆ ಅತ್ಯಂತ ಸುಂದರವಾದ ಭಾಷೆ :ಪ್ರಧಾನಿ ಮೋದಿ – Vishwanews24
ನವದೆಹಲಿ: ಕನ್ನಡ ಬಹಳ ಸುಂದರವಾದ ಭಾಷೆ ಎಂದು ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ಹಾಡಿ ಹೊಗಳಿದ್ದಾರೆ.
ಇತ್ತೀಚೆಗೆ ಲೋಕಸಭಾ ಚುನಾವಣಾ ಪ್ರಚಾರದ ನಿಮಿತ್ತ ಕರ್ನಾಟಕದ ಕಲ್ಬುರ್ಗಿಗೆ ಆಗಮಿಸಿದ್ದ ಪ್ರಧಾನಿ ಮೋದಿ, ಕನ್ನಡದಲ್ಲೇ ಭಾಷಣ ಆರಂಭಿಸಿ ನೆರೆದಿದ್ದವರ ಮನ ಗೆದ್ದಿದ್ದರು. ‘ಕಲ್ಬುರ್ಗಿಯ ಎಲ್ಲ ಬಂಧು-ಭಗಿನಿಯರಿಗೆ ನಮಸ್ಕಾರ. ಕಲ್ಬುರ್ಗಿ ಜಿಲ್ಲೆ ತ್ಯಾಗ, ಸೇವಾಮನೋಭಾವಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಬಂದು ಮಾತನಾಡುತ್ತಿರುವುದು ನನಗೆ ಅತ್ಯಂತ ಸಂತೋಷ ತಂದಿದೆ’ ಎಂದು ಕನ್ನಡದಲ್ಲೇ ಹೇಳಿದ್ದರು. ಆ ವಿಡಿಯೋ ಈಗ ಟ್ವಿಟ್ಟರ್ನಲ್ಲಿ ಹರಿದಾಡುತ್ತಿದೆ.
ಕನ್ನಡಿಗರೊಬ್ಬರು ಮಾಡಿದ ಟ್ವೀಟ್?ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡ ಭಾಷೆ ಅತ್ಯಂತ ಸುಂದರವಾದ ಭಾಷೆ ಎಂದು ಬಣ್ಣಿಸಿದ್ದಾರೆ. ಟ್ವಿಟರ್’ನಲ್ಲಿ ಕರ್ನಾಟಕದ ಸಹನಾ ಹೊಳೀಮಠ ಎಂಬುವರ ಟ್ವೀಟ್?ಗೆ ಮೋದಿ ಪ್ರತಿಕ್ರಿಯಿಸಿದ್ದಾರೆ.

ಕಲಬುರಗಿಯಲ್ಲಿ ನಡೆದಿದ್ದ ಸಮಾವೇಶದಲ್ಲಿ ಮೋದಿ ಅವರು ಪ್ರಾರಂಭದಲ್ಲಿ ಕನ್ನಡದಲ್ಲಿ ಮಾತನಾಡಿದ್ದರು. ಇದನ್ನು ಉಲ್ಲೇಖಿಸಿ ಸಹನಾ ಅವರು ಮೋದಿಜೀ ಕನ್ನಡದಲ್ಲಿ ಮಾತನಾಡಿದಾಗ ಖುಷಿ ಆಗುತ್ತದೆ ಅಲ್ವ ಎಂದಿದ್ದರು. ಅಲ್ಲದೆ, ಅವರು ಕನ್ನಡದಲ್ಲಿ ಮಾತನಾಡುವುದೇ ಒಂದು ಸುಂದರ ಕ್ಷಣ ಎಂದು ಟ್ವೀಟ್ ಮಾಡಿದ್ದರು
ಈ ವಿಡಿಯೋವನ್ನು ಕರ್ನಾಟಕದ ಸಹನಾ ಹೊಳಿಮಠ್ ಎಂಬುವವರು ಹೊಗಳಿ, ಪ್ರಧಾನಿ ಧ್ವನಿಯಲ್ಲಿ ಕನ್ನಡ ಕೇಳುವುದಕ್ಕೆ ಖುಷಿಯಾಗುತ್ತದೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಿ ಟ್ವೀಟ್ ಮಾಡಿದ್ದಲ್ಲದೇ ಕನ್ನಡ ಬಹಳ ಸುಂದರವಾದ ಭಾಷೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ತಮ್ಮ ಟ್ವೀಟ್ ಗೆ ಸ್ವತಃ ಪ್ರಧಾನಿಗಳಿಂದಲೇ ಪ್ರತಿಕ್ರಿಯೆ ಬಂದಿರುವುದಕ್ಕೆ ಸಹನಾ ಹೊಳಿಮಠ್ ಅವರೂ ಕೂಡ ತುಂಬಾ ಖುಷಿ ಪಟ್ಟಿದ್ದು, ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ. ಅಂತೆಯೇ ಪ್ರಧಾನಿ ಮೋದಿ ಅವರ ಕನ್ನಡ ಪ್ರೀತಿಗೆ ಹಲವು ಕನ್ನಡ ಟ್ವೀಟಿಗರೂ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
