ಕರಾವಳಿ ಭಾಗದಲ್ಲಿ ಮಂಗಗಳ ಶವ ಪತ್ತೆ : ಮಂಗನ ಕಾಯಿಲೆಗೆ ಸಾರ್ವಜನಿಕರಲ್ಲಿ ಆತಂಕ‌

Featured, ಉಡುಪಿ, ದಕ್ಷಿಣ ಕನ್ನಡ

ಉಡುಪಿ: ಮಲೆನಾಡಿನಲ್ಲಿ ಮಂಗನ ಕಾಯಿಲೆ ಹರಡಿ ಜನರು ಸಾವಿಗೀಡಾಗುತ್ತಿರುವ ಘಟನೆ ನಡೆಯುತ್ತಿರುವಾಗಲೇ ಇದೀಗ ಉಡುಪಿ ಜಿಲ್ಲೆಯ ಗಡಿ ಭಾಗವಾದ ಶಿರೂರಿನಲ್ಲಿ ಎರಡು ಮಂಗಗಳ ಶವ ಮತ್ತು ಶಿವಮೊಗ್ಗ ಜಿಲ್ಲೆಯ ಸಿದ್ದಾಪುರದಲ್ಲಿ ಒಂದು ಹೆಣ್ಣು ಮಂಗದ ಶವ ಪತ್ತೆಯಾಗಿದೆ.

ಜಿಲ್ಲೆಯ ಶಿರೂರು ಮೇಲ್ಪಂಕ್ತಿ ಎಂಬಲ್ಲಿ ಎರಡು ಮಂಗಗಳ ಶವ ದೊರೆತಿದೆ. ಸಿದ್ದಾಪುರ ಕಾಡಲ್ಲಿ ಈವರೆಗೆ 9 ಮತ್ತು ಹಳ್ಳಿಹೊಳೆಯಲ್ಲಿ 2 ಮಂಗನ ಕಳೇಬರ ಪತ್ತೆಯಾಗಿದೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ ಆರೋಗ್ಯ ಅಧಿಕಾರಿಗಳು ಮೃತ ಕೋತಿಯ ದೇಹದ ಕೆಲವು ಭಾಗಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಶಿವಮೊಗ್ಗಕ್ಕೆ ಕಳುಹಿಸಿಕೊಟ್ಟಿದ್ದಾರೆ

ಸದ್ಯ ಮಂಗನ ಸಾವು ಸಾರ್ವಜನಿಕರಲ್ಲಿ ಆತಂಕ‌ ಮೂಡಿಸಿದೆ. ಶಿರೂರು ಮೇಲ್ಪಂಕ್ತಿ ಎಂಬಲ್ಲಿ ಎರಡು ಮಂಗಗಳ ಶವ ದೊರೆತಿದೆ. ಕೋತಿಯ ದೇಹದ ಕೆಲವು ಭಾಗಗಳನ್ನು ಆರೋಗ್ಯಾಧಿಕಾರಿಗಳು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಶಿವಮೊಗ್ಗಕ್ಕೆ ಕಳುಹಿಸಿಕೊಡಲಾಗಿದೆ. ಸಿದ್ದಾಪುರದ ಬಳಿ ಸಿಕ್ಕ ಮಂಗನ ಶವವನ್ನು ಇಲಾಖೆಯ ಸಿಬ್ಬಂದಿ ತಪಾಸಣೆಗೆ ಬೇಕಾದ ಭಾಗಗಳನ್ನು ಸಂಗ್ರಹಿಸಿ, ಶಿವಮೊಗ್ಗದ ಲ್ಯಾಬ್​ಗೆ ಕಳುಹಿಸಿದ್ದಾರೆ. ಬಳಿಕ ಶವದ ಪೋಸ್ಟ್​ಮಾರ್ಟಂ ಮಾಡಿ ದಹಿಸಲಾಗಿದೆ.

ಉಡುಪಿ ಜಿಲ್ಲೆಯ ಕೆಎಂಸಿ ಆಸ್ಪತ್ರೆಯಲ್ಲಿ 42 ಮಂಗನ ಕಾಯಿಲೆ ಶಂಕಿತ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ 14 ಮಂದಿಗೆ ಕಾಯಿಲೆ ಇರುವುದು ದೃಢಪಟ್ಟಿದೆ.