ಕರಾವಳಿಯ 10 ಕಂಬಳಕ್ಕೆ ಸರಕಾರದಿಂದ ತಲಾ 5 ಲಕ್ಷ ರೂ. ಅನುದಾನ : ಅಶೋಕ್ ರೈ – vishwanews24
ಕರಾವಳಿಯ 10 ಕಂಬಳಕ್ಕೆ ಸರಕಾರದಿಂದ ತಲಾ 5 ಲಕ್ಷ ರೂ. ಅನುದಾನ : ಅಶೋಕ್ ರೈ
ಪುತ್ತೂರು : ಕರಾವಳಿಯಲ್ಲಿ ನಡೆಯಲಿರುವ 10 ಕಂಬಳಗಳಿಗೆ ರಾಜ್ಯ ಸರಕಾರ ಅನುದಾನ ಘೋಷಣೆ ಮಾಡಿದ್ದು, ಹಣ ಬಿಡುಗಡೆಯಾಗಿದೆ ಎಂದು ಎಂದು ಶಾಸಕ ಅಶೋಕ್ ಕುಮಾರ್‌ರೈ ತಿಳಿಸಿದ್ದಾರೆ.
ಪ್ರವಾಸೋಧ್ಯಮ ಇಲಾಖೆಯ ಮೂಲಕ 2024-25 ನೇ ಸಾಲಿನ ಕಂಬಳದ ಅನುದಾನ ಸರಕಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪುತ್ತೂರು , ಉಪ್ಪಿನಂಗಡಿ ಜಪ್ಪು, ಬಂಟ್ವಾಳ, ವೇಣೂರು, ಮೂಲ್ಕಿ, ಮಂಗಳೂರು, ನರಿಂಗಾಣ, ಮೂಡಬಿದ್ರಿ ಹಾಗೂ ಐಕಳ ಕಂಬಳ ಇದ್ದು ಈ ಕಂಬಳಕ್ಕೆ ತಲಾ 5 ಲಕ್ಷ ಅನುದಾನ ದೊರೆಯಲಿದೆ. ಈ ಹಿಂದೆ ಕಂಬಳಕ್ಕೆ ಅನುದಾನ ಕೋರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕುಟುಂಬ ಸಮೇತರಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ಶ್ರುತಿ – vishwanews24
