ಕರಾವಳಿಯ ಮೀನಿನ ಸ್ವಾದ ರಾಜ್ಯಾದ್ಯಂತ ವಿಸ್ತರಣೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ -Vishwanews24
ಮಂಗಳೂರು: ಮೀನುಗಾರಿಕಾ ಇಲಾಖೆಯ ‘ಮತ್ಸ್ಯ ದರ್ಶಿನಿ’ ಉಪಾಹಾರ ಮಂದಿರಗಳನ್ನು ರಾಜ್ಯದ ಎಲ್ಲ ಭಾಗಗಳಿಗೆ ವಿಸ್ತರಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಮಂಗಳೂರಿನಲ್ಲಿ ಗುರುವಾರ ದ.ಕ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾ ಮಂಡಲದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ್ದಾರೆ.
ಮೀನುಗಾರಿಕಾ ಇಲಾಖೆಯ ಮತ್ಸ್ಯ ದರ್ಶಿನಿ ಉಪಾಹಾರ ಮಂದಿರಗಳು ಪ್ರಸ್ತುತ ರಾಜ್ಯದ ಆಯ್ದ ನಗರಗಳಿಗೆ ಸೀಮಿತವಾಗಿದೆ. ಕರಾವಳಿಯ ಮೀನಿನ ಸ್ವಾದವನ್ನು ರಾಜ್ಯದ ಎಲ್ಲ ತಾಲೂಕುಗಳಿಗೆ ಒಯ್ಯಲಾಗುವುದು. ರಾಜ್ಯದ ಎಲ್ಲ ತಾಲೂಕುಗಳಲ್ಲಿ ಮತ್ಸ್ಯ ದರ್ಶಿನಿ ಆರಂಭದೊಂದಿದೆ ಮೀನುಗಾರಿಕೆಯನ್ನು ಬೆಂಬಲಿಸಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಇದೇ ಸಂದರ್ಭದಲ್ಲಿ, “ಮೀನುಗಾರ ಮಹಿಳೆಯರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೊಂದಿರುವ ಐವತ್ತು ಸಾವಿರ ರೂಪಾಯಿ ಸಾಲ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಆದ್ದರಿಂದ ಸಾಲ ಮರುಪಾವತಿಸಲು ಒತ್ತಡ ಹೇರಬಾರದೆಂದು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ನಿರ್ದೇಶಿಸಲಾಗಿದೆ” ಎಂದು ತಿಳಿಸಿದರು.
