ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್‌ ರಚನೆ ; ಅಧ್ಯಕ್ಷರಾಗಿ ಬೆಳಪು ದೇವಿ ಪ್ರಸಾದ್ ಶೆಟ್ಟಿ  ಆಯ್ಕೆ – vishwanews24

Featured, ಉಡುಪಿ, ದಕ್ಷಿಣ ಕನ್ನಡ, ರಾಜ್ಯ ನ್ಯೂಸ್

ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್‌ ರಚನೆ ; ಅಧ್ಯಕ್ಷರಾಗಿ ಬೆಳಪು ದೇವಿ ಪ್ರಸಾದ್ ಶೆಟ್ಟಿ  ಆಯ್ಕೆ

ಕಂಬಳ ರಾಜ್ಯ ಕ್ರೀಡಾ ಸಂಸ್ಥೆಯಾಗಿ ಸರ್ಕಾರದಿಂದ ಮಾನ್ಯತೆ

ಉಡುಪಿ : ಕರ್ನಾಟಕದ ಪರಂಪರೆಯ ಕ್ರೀಡೆಯಾದ ಕಂಬಳ ಈಗ ರಾಜ್ಯ ಮಟ್ಟದ ಅಧಿಕೃತ ಕ್ರೀಡಾ ಸಂಸ್ಥೆಯಾಗಿ ಹೊಸ ಆಯಾಮವನ್ನು ಪಡೆದಿದೆ.

ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಇದೀಗ ಅಧಿಕೃತವಾಗಿ ರಚನೆಯಾಗಿದ್ದು, ರಾಜ್ಯ ಕ್ರೀಡಾ ಸಂಸ್ಥೆಯಾಗಿ ಸರ್ಕಾರದಿಂದ ಮಾನ್ಯತೆ ಪಡೆದಿದೆ. ಈ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಬೆಳಪು ದೇವಿ ಪ್ರಸಾದ್ ಶೆಟ್ಟಿ ಅವರನ್ನು ಏಕಮತದಿಂದ ಆಯ್ಕೆ ಮಾಡಲಾಗಿದೆ.

ಹೊಸ ಅಸೋಸಿಯೇಷನ್‌ನಲ್ಲಿ ಮೂವರು ಗೌರವ ಸಲಹೆಗಾರರು, ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಸಮಿತಿ ಸದಸ್ಯರು ಸೇರಿದಂತೆ ಒಟ್ಟು 21 ಸದಸ್ಯರ ಸಮಿತಿ ಆಯ್ಕೆಗೊಂಡಿದ್ದು, ಇದರಲ್ಲಿ 13 ಮಂದಿ ಪ್ರಮುಖ ಸದಸ್ಯರು ಇರಲಿದ್ದಾರೆ.

ರಾಜ್ಯ ಮಟ್ಟದಲ್ಲಿ ಕಂಬಳ ಕ್ರೀಡೆಗೆ ಸರಕಾರದಿಂದ ಪ್ರತಿವರ್ಷ ವಿಶೇಷ ಅನುದಾನ ನೀಡುವ ನಿರ್ಧಾರವೂ ಕೈಗೊಳ್ಳಲಾಗಿದೆ. ಇದರಿಂದ ಕಂಬಳದ ಪರಂಪರೆ, ಕ್ರೀಡಾತ್ಮಕತೆ ಹಾಗೂ ರೈತ ಸಮುದಾಯದ ಹೆಮ್ಮೆ ಮತ್ತಷ್ಟು ಬಲ ಪಡೆಯಲಿದೆ ಎಂದು ಅಸೋಸಿಯೇಷನ್‌ ಸದಸ್ಯರು ತಿಳಿಸಿದ್ದಾರೆ.

ಈ ಹೊಸ ಅಸೋಸಿಯೇಷನ್‌ ಮೂಲಕ ಕಂಬಳ ಕ್ರೀಡೆಯ ಸಂಘಟನೆ, ನಿರ್ವಹಣೆ ಹಾಗೂ ಪ್ರಚಾರ ಕಾರ್ಯಗಳು ರಾಜ್ಯದಾದ್ಯಂತ ಸಮನ್ವಯವಾಗಿ ನಡೆಯಲಿವೆ.

Leave a Reply