ಕಲಬುರಗಿ : ಹಲವೆಡೆ ಲಘು ಭೂಕಂಪನ: ಆತಂಕದಲ್ಲಿ ಜನತೆ , ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆ ದಾಖಲು – Vishwanews24
ಕಲಬುರಗಿ : ಹಲವೆಡೆ ಲಘು ಭೂಕಂಪನ: ಆತಂಕದಲ್ಲಿ ಜನತೆ , ರಿಕ್ಟರ್ ಮಾಪಕದಲ್ಲಿ 3.4 ರಷ್ಟು ತೀವ್ರತೆ ದಾಖಲು
ಕಲಬುರಗಿ : ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಲವಡೆ ಇಂದು ಬೆಳಗ್ಗೆ 9.48 ರ ಸುಮಾರಿಗೆ ಮತ್ತೆ ಲಘು ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆ ದಾಖಲಾಗಿದೆ.
ಇಂದು ಬೆಳಗ್ಗೆ 9.48 ರ ಸುಮಾರಿಗೆ 5 ಸೆಕೆಂಡ್ ಗಳ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.
ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 3.4 ತೀವ್ರತೆ ದಾಖಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೆನಕಹಳ್ಳಿ ಸೇರಿದಂತೆ ಸುತ್ತಮತ್ತಲಿನ ಗ್ರಾಮಗಳಲ್ಲಿ ಲಘು ಭೂಕಂಪನವಾಗಿದ್ದು, ಜನರು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ.
ಜೋರಾದ ಸದ್ದಿನೊಂದಿಗೆ ಭೂಮಿ ಕಂಪಿಸಿದ ಕಾರಣ, ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ. ಅಲ್ಲದೇ ಕೆಲ ಕಾಲ ಮನೆಯ ಹೊರಗಡೆ ಆತಂಕದಲ್ಲಿ ಕಾಲ ಕಳೆದಿರೋದಾಗಿ ಹೇಳಲಾಗುತ್ತಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Join our Whatsapp group by clicking the below link 👇👇
