ಕಾಂಗ್ರೆಸ್ ಎಂದಿಗೂ ಜಾತಿ, ಧರ್ಮದ ಜೊತೆಯಲ್ಲಿ ಆಟವಾಡಿದ ಪಕ್ಷವಲ್ಲ; ಪ್ರೀತಿ- ಪ್ರೇಮದ ಜೊತೆ ಬೆರೆತ ಪಕ್ಷ
ಕಾಂಗ್ರೆಸ್ ಪಕ್ಷಕ್ಕೆ ಸೋಲಿಲ್ಲ, ಸೋಲಲು ಸಾಧ್ಯವಿಲ್ಲ..
ಮುಂಬರುವ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬರುವುದು ಶತಸಿದ್ಧ..
ಸವಣೂರ: ಕಾಂಗ್ರೆಸ್ ಪಕ್ಷ ಎಂದಿಗೂ ಜಾತಿ, ಧರ್ಮದ ಜೊತೆಯಲ್ಲಿ ಆಟವಾಡಿದ ಪಕ್ಷವಲ್ಲ. ಪ್ರೀತಿ- ಪ್ರೇಮದ ಜೊತೆಯಲ್ಲಿ ಬೆರೆತ ಪಕ್ಷವಾಗಿದೆ ಎಂದು ಮಾಜಿ ಸಚಿವೆ ಜಯಮಾಲಾ ತಿಳಿಸಿದರು.
ಪಟ್ಟಣದ ಶಾದಿ ಮಹಲ್ನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಡಿಜಿಟಲ್ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರನ್ನು ಪಕ್ಷದ ಸದಸ್ಯರನ್ನಾಗಿ ಮಾಡಿ ಅವರಿಗೆ ಸರ್ಕಾರ ರೂಪಿಸುವ ಎಲ್ಲ ಯೋಜನೆಗಳು ತಲುಪುವಂತೆ ಮಾಡಬೇಕಿದೆ. ಮುಂಬರುವ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬರುವುದು ಶತಸಿದ್ಧ. ಹಾವೇರಿ(Haveri) ಜಿಲ್ಲೆಯಲ್ಲಿರುವ 6 ಕ್ಷೇತ್ರಗಳಲ್ಲಿಯೂ ಗೆಲುವನ್ನು ಸಾಧಿಸಲಿದೆ.
ಕಾರ್ಯಕರ್ತರು ಸೋತಿದ್ದೇವೆ ಎಂಬ ಮನೋಭಾವನೆ ಬದಿಗಿಟ್ಟು ಕಾರ್ಯ ನಿರ್ವಹಿಸಿ. ಕಾಂಗ್ರೆಸ್ ಪಕ್ಷಕ್ಕೆ ಸೋಲಿಲ್ಲ, ಸೋಲಲು ಸಾಧ್ಯವಿಲ್ಲ. ಭಾರತದ ಆಯಸ್ಸು ಮತ್ತು ಪಕ್ಷದ ಆಯಸ್ಸು ಒಂದೇ ರೀತಿ ಇರುವಾಗ ಸೋಲಿನ ಮಾತಿಲ್ಲ. ಪ್ರತಿ ಮನೆಮನಗಳಿಗೆ ತೆರಳಿ ಬೂತ್ ಮಟ್ಟದಲ್ಲಿ ಸಂಘಟನೆಗಳನ್ನು ಬಲಪಡಿಸಿ, ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಿದಲ್ಲಿ ಸದಸ್ಯತ್ವ ಅಭಿಯಾನ ಬಲಗೊಳ್ಳಲಿದೆ.
ಬೆಂಗಳೂರು: ಸುರತ್ಕಲ್ ಟೋಲ್ ಗೇಟನ್ನು ಆದಷ್ಠು ಶೀಘ್ರ ರದ್ದುಗೊಳಿಸಿ : ಸದನದಲ್ಲಿ ಖಾದರ್ ಆಗ್ರಹ – VIshwanews24
