ಕಾಂಗ್ರೆಸ್ ನಲ್ಲಿ ಅವಕಾಶ ಸಿಕ್ಕರೆ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವೆ: ಅಮೃತ್ ಶೆಣೈ
ಉಡುಪಿ: ಕರ್ನಾಟಕದ ಸುಮಾರು 99 ಮಂದಿ ಪ್ರಭಾವಿ ಕಾಂಗ್ರೆಸ್ ನಾಯಕರು ಎಐಸಿಸಿ ಸದಸ್ಯರಾಗಿದ್ದಾರೆ. ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ ಮುಂತಾದವರು ಸದಸ್ಯರಾಗಿರುವ ಸಮಿತಿಗೆ ಈಗ ಅಮೃತ್ ಶೆಣೈ ಕೂಡ ಸೇರ್ಪಡೆಯಾಗಿ ತನ್ಮೂಲಕ ಕಾಂಗ್ರೆಸ್ನಲ್ಲಿ ಓರ್ವ ಪ್ರಭಾವಿ ನಾಯಕರಾಗಿ ಅಮೃತ್ ಶೆಣೈ ಗುರುತಿಸಲ್ಪಟ್ಟಿದ್ದಾರೆ.
ಅಮೃತ್ ಶೆಣೈ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ , ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಇತ್ತೀಚಿನ ತನಕ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ಉಡುಪಿಯ ಹಲವಾರು ಸಂಘ ಸಂಸ್ಥೆಗಳು, ಸಮಾಜ ಸೇವಾ ಸಂಸ್ಥೆಗಳು, ಶಾಲಾಭಿವೃದ್ಧಿ ಮಂಡಳಿ, ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಅಮೃತ್ ಶೆಣೈ ಅವರಿಗೆ ಇತ್ತೀಚೆಗಷ್ಟೆ ದೆಹಲಿ ಮೂಲದ ಸಂಸ್ಥೆಯೊಂದು ಪ್ರಶಸ್ತಿ ನೀಡಿ ಗೌರವಿಸಿತ್ತು.
2019ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯ ವೇಳೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಮೃತ್ ಶೆಣೈ ಅವರ ಹೆಸರು ಮಂಚೂಣಿಯಲ್ಲಿದೆ.
ಕಳೆದ ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಮೃತ್ ಶೆಣೈ ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂಬ ವೈರಲ್ ಸುದ್ದಿಯ ಬಗ್ಗೆ ವಿಶ್ವ ನ್ಯೂಸ್24 ಜತೆ ಮಾತನಾಡಿದ್ದಾರೆ ಈ ಕುರಿತ ಡಿಟೇಲ್ಸ್ ಇಲ್ಲಿದೆ.
- ನೀವು ಟಿಕೇಟ್ ಆಕಾಂಕ್ಷಿಯೇ..?
ನಾನು ಕಾಂಗ್ರೇಸ್ ಪಕ್ಷದ ಕಾರ್ಯಕರ್ತ ಮತ್ತು ನನ್ನ ಕಾರ್ಯಚಟುವಟಿಕೆಗಳನ್ನ ಗಮನಿಸಿದ ನಮ್ಮ ಕಾರ್ಯಕರ್ತರು , ಹಿತೈಷಿಗಳು , ನನ್ನ ವಿಚಾರವನ್ನ ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ಉಡುಪಿ ಚಿಕ್ಕಮಂಗಳೂರಿನ ಲೋಕಸಭಾ ಅಭ್ಯರ್ಥಿಯೆಂದು ಬಿತ್ತರಿಸುತ್ತಿದ್ದಾರೆ ಅವಕಾಶ ಸಿಕ್ಕರೆ ಸ್ಪರ್ದಿಸುತ್ತೆನೆ.
- ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ಯ ಹೇಗೆ..?
ಗ್ರೀನ್ ಸಿಗ್ನಲ್ ಏನ್ ಸಿಗ್ಲಿಲ್ಲ ಮತ್ತು ಇಷ್ಟು ಬೇಗ ಯಾವುದೇ ಪಕ್ಷದಲ್ಲಿ ಅಭ್ಯರ್ಥಿಯನ್ನ ಘೋಷನೆ ಕೂಡ ಮಾಡುವುದಿಲ್ಲ. ಮತ್ತೆ ನಮ್ಮ ಪಕ್ಷದ ಹಿರಿಯರು ನನ್ನ ಹೆಸರನ್ನ ರೆಕಮಂಡ್ ಮಾಡ್ತೇವೆ ಅಂತಾ ಭರವಸೆ ನೀಡಿದ್ದಾರೆ ಅಷ್ಟೆ ಬಿಟ್ರೆ ಬೇರೆನೂ ಇಲ್ಲ.
- ಪ್ರಸ್ತುತ ಸಂಸದರ ಬಗ್ಗೆ ಏನ್ ಹೇಳ್ತಿರಾ..?
ನಮ್ಮ ಸಂಸದರನ್ನ ನಾವೂ ನೋಡ್ಲೆ ಇಲ್ಲ, ವಿವಾದಾತ್ಮಕ ಘಟನೆ ಸಂಭವಿಸಿದಾಗ ಉಡುಪಿಗೆ ಬಂದು ಭಾಷಣ ಅಥವಾ ಪತ್ರೀಕಾಗೋಷ್ಟಿ ನಡೆಸುವುದು ಬಿಟ್ರೆ ಬೇರೆ ಏನು ಮಾಡಿಲ್ಲ. ಯುವಕ ಯುವತಿಯರನ್ನ ಸಬಲಿಕರಣ ಮಾಡುವುದರ ಬಗ್ಗೆ ಚೂರು ಕಾಳಜಿಯಿಲ್ಲದ ಸಂಸದೆ ಶೋಭಾ ಕರಾಂದ್ಲಾಜೆ.ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಸಂಸತ್ತಿನಲ್ಲಿ ಒಂದು ಶಬ್ದ ಮಾತನಾಡದೆ ನಮ್ಮೂರಿನ ತೆಂಗು ಬೆಳೆ, ಮೀನುಗಾರರ ಸಮಸ್ಯೆ,ಹೆದ್ದಾರಿ ಸಮಸ್ಯೆಯನ್ನ ದ್ವಿಗುಣ ಗೊಳಿಸಿದ್ದಾರೆ. ಹಾಗಾಗಿ ಪ್ರಸ್ತುತ ಎಮ್ ಪಿ ಯ ಬಗ್ಗೆ ತೀವ್ರ ಅಸಮಾಧಾನ ಮತದಾರರಿಗಿದೆ.
- ನಿಮಗೆ ಟಿಕೆಟ್ ಸಿಕ್ಕರೆ ನಿಮ್ಮ ಯೋಜನೆ..?
ಜಿಲ್ಲೆಯಲ್ಲಿ ರೈಲ್ವೆ, ಹೆದ್ದಾರಿ, ಪಾಸ್ ಪೋರ್ಟಿಗೆ ಸಂಭಂಧಪಟ್ಟ ವಿಚಾರ, ಸಿಆರ್ ಝೆಡ್,ಮೀನುಗಾರರ ಸಮಸ್ಯೆ, ಅಡಿಕೆ ಬೆಳೆಗಾರರ ಸಮಸ್ಯೆಗಳಿವೆ ಅದನ್ನ ಬಗೆಹರಿಸುವ ಪ್ರಯತ್ನದ ಜೊತೆಗೆ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿಸುವ ಕಾರ್ಯ ಮಾಡುವ ಇಚ್ಛೆಯನ್ನ ಹೊಂದಿದ್ದೆನೆ.
- ಮೋದಿ ಹವಾದಲ್ಲಿ ಜನ ನಿಮ್ಮನ್ನ ಬೆಂಬಲಿಸಬಹುದೇ..
ನಮ್ಮ ಜಿಲ್ಲೆಯ ಜನ ಬಹಳ ಪ್ರಜ್ಞಾವಂತರು ಮತ್ತು ಬುದ್ಧಿವಂತರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯ ಸುಳ್ಳಿನ ಪ್ರಚಾರದಿಂದ ಗೆದ್ದಿರಬಹುದು, ಆದ್ರೇ ಅವರವರ ವರ್ಚಸ್ಸಿನ ಮೇಲೆ ಮತ್ತು ಪಕ್ಷವನ್ನ ನೋಡಿ ಜನ ಓಟ್ ಹಾಕುವಂತಹದು ಬಿಟ್ರೇ ಎಲ್ಲವೂ ಮೋದಿ ಹವಾ ಅಲ್ಲಾ, ಸ್ವಲ್ಪ ಸೆಕ್ಯೂಲರಿಸಮ್ ಕೂಡ ಬೇಕಾಗುತ್ತೆ, ಮತ್ತೆ ಪ್ರಸ್ತುತ ಸಂಸದೆ ಏನ್ ಮಾಡಿದ್ದಾರೆ ಅಂತಾ ಜನ್ರಿಗೆ ಗೊತ್ತಿದೆ. ಮತ್ತೆ ನಾನೇನು ಅಪರಚಿತನಲ್ಲ ಸದಾ ಜನರೊಂದಿಗೆ ಬೆರೆಯುತ್ತಿರುವುದರಿಂದ ಜನ ನನನ್ನ ಬೆಂಬಲಿಸುತ್ತಾರೆಂಬ ನಂಬಿಕೆಯಿದೆ.
- ಕಡೆಯದಾಗಿ ನಿಮ್ಮ ಮಾತು..?
ನಾನೋಬ್ಬ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಈ ಹಿಂದಿನ ಎಲ್ಲಾ ಚುನಾವಣೆಗಳಲ್ಲಿ ಸಕ್ರಿಯವಾಗಿ ನಾಯಕರ ಮತ್ತು ಕಾರ್ಯಕತರ ಜತೆಗೂಡಿ ಕೆಲಸ ಮಾಡಿದ್ದೆನೆ, ಇದುವರೆಗೆ ಪಕ್ಷದಲ್ಲಿ ದುಡಿದ ಕಾರಣಕ್ಕಾಗಿ ಮತ್ತು ಹಿರಿಯರ ಹೇಳಿರುವ ಮಾತಿಗೆ ಅನುಗುಣವಾಗಿ ಹೈಕಮಾಂಡ್ ನನಗೆ ಟಿಕೆಟ್ ನೀಡುವ ಭರವಸೆಯಿದೆ ಮತ್ತು ಕಡೆಯದಾಗಿ ನಾನು ಸದಾ ಜನಸೇವಕ .
