ಕಾಂಗ್ರೆಸ್ ಪಕ್ಷ ಸೋಲಲು ಹೆಚ್.ಡಿ. ದೇವೇಗೌಡ ಹಾಗೂ ಸಿದ್ದರಾಮಯ್ಯ ನೇರ ಕಾರಣ : ಎ. ಮಂಜು -Vishwanews24
ಕೊಡಗು : ಲೋಕಸಮರದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸೋಲಲು ಹೆಚ್.ಡಿ. ದೇವೇಗೌಡ ಹಾಗೂ ಸಿದ್ದರಾಮಯ್ಯ ನೇರ ಕಾರಣ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎ. ಮಂಜು ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಪಕ್ಷಕ್ಕಾಗಿ ದುಡಿದವರಿಗೆ ಸ್ಥಾನಮಾನಗಳು ಸಿಗುತ್ತಿಲ್ಲ. ಅಪವಿತ್ರ ಮೈತ್ರಿ ಸರ್ಕಾರಕ್ಕೆ ಜನ ಛೀಮಾರಿ ಹಾಕಿ ಬಿಜೆಪಿಯನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿದರೂ ರಾಜೀನಾಮೆ ನೀಡಿ ಮನೆಗೆ ಹೋಗೋದು ಬಿಟ್ಟು ಅಧಿಕಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ನಿಷ್ಠಾವಂತರಿಗಿಂತ ತಲೆಬಾಗುವವರಿಎ ಮಾತ್ರ ಹೆಚ್ಚಿನ ಲಾಭವಿದೆ ಎಂದರು.
ದೇವೇಗೌಡ ಮತ್ತು ಮಕ್ಕಳ ಪಕ್ಷದಲ್ಲಿ ಅಧಿಕಾರವೆಲ್ಲಾ ಅವರ ಕುಟುಂಬದವರಿಗೆ ಆಗಬೇಕು. ಬೇರೆಯವರಿಗೆ ಅಲ್ಲಿ ಅವಕಾಶವೇ ಇಲ್ಲ.
ಹಿರಿಯ ರಾಜಕಾರಣಿ ಹೆಚ್.ವಿಶ್ವನಾಥ್ ಅವರನ್ನು ಜೆಡಿಎಸ್ ನವರು ಚೆನ್ನಾಗಿ ಬಳಸಿಕೊಂಡರು. ಇದೀಗ ಪಕ್ಷದೊಳಗೆ ಅಪ್ಪ ಮಕ್ಕಳ ಜೊತೆ ಬೇರೆ ಯಾರೂ ಇರಲು ಸಾಧ್ಯವೇ ಇಲ್ಲ. ಇದರಿಂದ ಬೇಸರವಾಗಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳಿದರು.
