ಕಾಂಗ್ರೆಸ್ ಪಕ್ಷ ಹಾಗೂ ನಾವು ಡಿ. ಕೆ. ಶಿವಕುಮಾರ್​​ ಜೊತೆಗಿದ್ದೇವೆ :ಎಂ.ಬಿ.ಪಾಟೀಲ -Vishwanews24

Featured, ರಾಜ್ಯ ನ್ಯೂಸ್

ವಿಜಯಪುರ:  ಬಿಜೆಪಿ ಸೇಡಿನ ರಾಜಕಾರಣಕ್ಕಾಗಿ ಐಟಿ, ಇಡಿ ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಸಚಿವ  ಎಂ.ಬಿ.ಪಾಟೀಲ ಗಂಭೀರ ಆರೋಪ ಮಾಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶದಲ್ಲಿ ಸೇಡಿನ ರಾಜಕೀಯ ನಡೆಯುತ್ತಿದೆ. ಚಿದಂಬರಂ ಆಯ್ತು, ಈಗ ಡಿಕೆಶಿ ಬಂಧನವಾಗಿದೆ. ತಪ್ಪು ಮಾಡಿದವರ ವಿರುದ್ಧ ವಿಚಾರಣೆ ಮಾಡಲಿ ಎಂದು ಕಿಡಿಕಾರಿದರು.

ಈ ಹಿಂದೆ ಜನಾರ್ಧನ ರೆಡ್ಡಿಬಂಧನವಾಗಿದ್ದು ಗಣಿಗೆ ಸಂಬಂಧಿಸಿದ ವಿಚಾರದಲ್ಲಿ. ಈಗ ಡಿ. ಕೆ. ಶಿವಕುಮಾರ್​​​ ಬಂಧನವಾಗಿದ್ದು ರಾಜಕೀಯ ಸೇಡಿನ ಹಿನ್ನೆಲೆಯಲ್ಲಿ ಎಂದು ಗೃಹ ಇಲಾಖೆ ಮಾಜಿ ಸಚಿವ ಎಂ. ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ನಾವು ಡಿ. ಕೆ. ಶಿವಕುಮಾರ್​​ ಜೊತೆಗಿದ್ದೇವೆ. ಇದನ್ನು ಎದುರಿಸಿ ಡಿ. ಕೆ. ಶಿವಕುಮಾರ್​​ ಹೊರಗೆ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಡಿಕೆ ಶಿವಕುಮಾರ್​ ಬಂಧನ ಖಂಡಿಸಿ ಇಂದು ಸ್ವಾಭಾವಿಕವಾಗಿ ಪ್ರತಿಭಟನೆ ನಡೆಯುತ್ತಿದೆ. ಕೆಲ ಕಿಡಿಗೇಡಿಗಳೂ ಇಂಥ ವೇಳೆ ಭಾಗಿಯಾಗಿರುತ್ತಾರೆ ಎಂದು ಹೇಳಿದರು.