ಕಾಂಗ್ರೆಸ್ ಪಕ್ಷವನ್ನು ಮುಗಿಸುವ ಸಂಚಿನಿಂದ ನನ್ನನ್ನು ಬಂಧಿಸಲಾಗಿದೆ : ಬಂಧನದ ನಂತರ ಡಿಕೆ ಶಿ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಬಿಜೆಪಿಯ ಷಡ್ಯಂತ್ರ್ಯದಿಂದ  ತಮ್ಮ ಬಂಧನವಾಗಿರುವುದಾಗಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಇಡಿ ಬಂಧನದ ನಂತರ  ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷವನ್ನು ಮುಗಿಸುವ ಸಂಚಿನಿಂದ ರಾಜಕೀಯ ಪ್ರೇರಿತದಿಂದ ಬಂಧಿಸಲಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಟ್ವೀಟ್ ಮಾಡಿದ ಡಿಕೆ ಶಿವಕುಮಾರ್, ಬಿಜೆಪಿಯ ಕುತಂತ್ರ, ಮತ್ತು ಪ್ರತಿಕಾರಕ್ಕೆ ಬಲಿಯಾಗಿದ್ದೇನೆ ತಮ್ಮನ್ನು ಆರೆಸ್ಟ್ ಮಾಡಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿಯ ಸ್ನೇಹಿತರಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದ್ದಾರೆ.