ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸದಿದ್ದರೆ ಕಾನೂನು ಪ್ರಕಾರ ನಿಲ್ಲಿಸುತ್ತೇವೆ : ಆರಗ ಜ್ಞಾನೇಂದ್ರ – Vishwanews24
ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸದಿದ್ದರೆ ಕಾನೂನು ಪ್ರಕಾರ ನಿಲ್ಲಿಸುತ್ತೇವೆ : ಆರಗ ಜ್ಞಾನೇಂದ್ರ – Vishwanews24
ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸದಿದ್ದರೆ ಕಾನೂನು ಪ್ರಕಾರ ನಿಲ್ಲಿಸುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಪಾದಯಾತ್ರೆ ಬಗ್ಗೆ ಜವಾಬ್ದಾರಿಯುತ ಪಕ್ಷ ರಾಜಕೀಯ ಲಾಭಕ್ಕೆ ಹೇಗೆ ನಡೆದುಕೊಳ್ಳುತ್ತಿದೆ ಅಂತ ತೋರಿಸಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಹೈಕೋರ್ಟ್ ಪಾದಯಾತ್ರೆ ನಿಲ್ಲಿಸುವಂತೆ ಆದೇಶ ಹೊರಡಿಸಿದೆ. ಪಾದಯಾತ್ರೆಯಿಂದಾಗಿ ಜನ ಆತಂಕಗೊಂಡಿದ್ದಾರೆ ಎಂದರು.
ಮಂಗಳೂರು: ಕೊರೋನಾ ಹೆಚ್ಚಳ – ದ.ಕ. ಜಿಲ್ಲೆಯಲ್ಲಿರುವ ಎಲ್ಲಾ ರಿಕ್ರಿಯೇಷನ್ ಕ್ಲಬ್ ಮುಚ್ಚಲು ಆದೇಶ – VIshwanews24
ಪಾದಯಾತ್ರೆಯಲ್ಲಿ ಇರುವವರಿಗೆ ಹೆಚ್ಚಾಗಿ ಕೊರೊನಾ ಪಾಸಿಟಿವ್ ಬರುತ್ತಿದೆ. ವೀರಪ್ಪ ಮೊಯ್ಲಿ, ಮಲ್ಲಾಜಮ್ಮ, ಶಿವಶಂಕರ್ ರೆಡ್ಡಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇವರೆಲ್ಲ ಗೊತ್ತಿರುವವರು. ಆದರೆ ಗೊತ್ತಿಲ್ಲದೇ ಇರುವ ಹಲವರಿಗೂ ಸಹ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಇದು ಕೊರೊನಾ ಹರಡುವ ಪಾದಯಾತ್ರೆ ಎಂದು ಕಿಡಿಕಾರಿದರು.
ಸದ್ಯ ಕಾಂಗ್ರೆಸ್ ಸಭೆ ನಡೆಸುತ್ತಿದೆ. ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸದಿದ್ದರೆ ಕಾನೂನು ಪ್ರಕಾರ ನಿಲ್ಲಿಸುತ್ತೇವೆ. ಕಾಯಿದೆ ಪ್ರಕಾರ ಪಾದಯಾತ್ರೆ ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿವೆ. ಈಗಾಗಲೇ ಬುಧವಾರ ರಾತ್ರಿಯೇ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಉಡುಪಿ : ಜಿಲ್ಲೆಯಲ್ಲಿ ಕೋವಿಡ್ ಸ್ಫೋಟ ; ಸಂಜೆ 7 ಗಂಟೆ ನಂತರ ಬೀಚ್ ಪ್ರವೇಶ ನಿಷೇಧ – Vishwanews24
