ಕಾಂಗ್ರೆಸ್ನವರಿಗೆ ತಕ್ಕ ಉತ್ತರ ಕೊಡಬಲ್ಲವನು ನಾನೊಬ್ಬನೆ : ಯತ್ನಾಳ್ – Vishwanews24
ಕಾಂಗ್ರೆಸ್ನವರಿಗೆ ತಕ್ಕ ಉತ್ತರ ಕೊಡಬಲ್ಲವನು ನಾನೊಬ್ಬನೆ : ಯತ್ನಾಳ್
ಬೆಂಗಳೂರು: ನಾನು ಎಲ್ಲಿಯೂ ವಿಪಕ್ಷ ನಾಯಕನ ಸ್ಥಾನದ ಬಗ್ಗೆ ಆಪೇಕ್ಷೆ ಪಟ್ಟಿಲ್ಲ. ಆದ್ರೇ ನಾನು ವಿರೋಧ ಪಕ್ಷದ ನಾಯಕನಾದ್ರೇ ಮಜಾ ಇರುತ್ತದೆ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ವಿರೋಧ ಪಕ್ಷದ ನಾಯಕನಾದ್ರೇ ಈ ಸರ್ಕಾರದ ಭ್ರಷ್ಟಾಚಾರ, ಗುಂಡಾಗಿರಿ ಆರು ತಿಂಗಳು ಇರೋದಿಲ್ಲ ಎಂದರು.
ನಾನು ಯಾವತ್ತೂ ವಿಪಕ್ಷ ನಾಯಕನ ಸ್ಥಾನಕ್ಕೆ ಆಸೆ ಪಟ್ಟಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ಕೂಡ ಮಾಡಿಲ್ಲ. ನನ್ನ ಹೆಸರು ಯಾಕೆ ತಳುಕು ಹಾಕಿಕೊಂಡಿದೆಯೋ ಗೊತ್ತಿಲ್ಲ. ಆದ್ರೇ ನಾನು ವಿರೋಧ ಪಕ್ಷದ ನಾಯಕನಾದ್ರೇ ಮಜಾ ಇರುತ್ತದೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ – Vishwanews24
