ಕಾಂಗ್ರೆಸ್ ‘ಸಂಘಟನೆಯ ಜತೆ ಬಲವರ್ಧನೆಗೆ ಮಾ. 3ರಿಂದ ಪಕ್ಷದ ಶಾಸಕರಿಲ್ಲದ 100 ಕ್ಷೇತ್ರಗಳಲ್ಲಿ ಪಾದಯಾತ್ರೆ: ಡಿ.ಕೆ. ಶಿವಕುಮಾರ್ -Vishwanews24
ಕಾಂಗ್ರೆಸ್ ‘ಸಂಘಟನೆಯ ಜತೆ ಬಲವರ್ಧನೆಗೆ ಮಾ. 3ರಿಂದ ಪಕ್ಷದ ಶಾಸಕರಿಲ್ಲದ 100 ಕ್ಷೇತ್ರಗಳಲ್ಲಿ ಪಾದಯಾತ್ರೆ: ಡಿ.ಕೆ. ಶಿವಕುಮಾರ್ -Vishwanews24
ಬೆಂಗಳೂರು: ‘ಸಂಘಟನೆಯ ಜತೆಗೆ ಬಲವರ್ಧನೆಗೆ ಒತ್ತು ನೀಡುವ ಉದ್ದೇಶದಿಂದ ಪಕ್ಷದ ಶಾಸಕರಿಲ್ಲದ 100 ಕ್ಷೇತ್ರಗಳಲ್ಲಿ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಮಾರ್ಚ್ 3ರಂದು ಈ ಕಾರ್ಯಕ್ರಮ ಆರಂಭಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಮಾರ್ಚ್ 1ರಂದು ದೇವಾಲಯ ಹಾಗೂ ದರ್ಗಾಕ್ಕೆ ಭೇಟಿ ಮಾಡಿ ಪೂಜೆ, ಪ್ರಾರ್ಥನೆ ಸಲ್ಲಿಸಿ, 3ರಂದು ಕಾಂಗ್ರೆಸ್ ಕಚೇರಿಯಿಂದ ಬೆಳಿಗ್ಗೆ 5 ಗಂಟೆಗೆ ಹೊರಟು ದೇವನಹಳ್ಳಿಯಲ್ಲಿ ಮೊದಲ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಂಜೆ 3 ಗಂಟೆಗೆ ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮ ನಡೆಯಲಿದೆ’ ಎಂದರು.
ಉಡುಪಿ : ಅಜ್ಜರಕಾಡಿನ ಪಾರ್ಕಿಂಗ್ ಸ್ಥ ಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು -Vishwanews24
‘ಪ್ರತಿ ಕ್ಷೇತ್ರದಲ್ಲೂ ಜನರ ಮಧ್ಯೆ ಈ ಕಾರ್ಯಕ್ರಮ ಮಾಡುತ್ತೇವೆ. ಬಿಜೆಪಿ ಸರ್ಕಾರದಿಂದ ಎಲ್ಲ ವರ್ಗದ ಜನರಿಗೆ ತೊಂದರೆಯಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯಾಗಿದೆ. ವರ್ತಕರು, ರೈತರು, ಕಾರ್ಮಿಕರು ಎಲ್ಲ ವರ್ಗಕ್ಕೂ ಅನ್ಯಾಯವಾಗುತ್ತಿದೆ. ಈ ವಿಚಾರವಾಗಿ ಜನರಲ್ಲಿ ಎಚ್ಚರಿಸಿ, ಅವರ ಧ್ವನಿಯನ್ನು ಕೇಂದ್ರ – ರಾಜ್ಯ ಸರ್ಕಾರಕ್ಕೆ ಮುಟ್ಟಿಸುತ್ತೇವೆ. ಎಲ್ಲ ನಗರಗಳ ಮುಖ್ಯರಸ್ತೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳುತ್ತೇವೆ’ ಎಂದರು.
‘ಅಧಿವೇಶನದಲ್ಲಿ ಭಾಗವಹಿಸಲು ತೊಂದರೆ ಆಗದಂತೆ ಪಕ್ಷದ ಕಾರ್ಯಾಧ್ಯಕ್ಷರಿಗೆ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಜಿಲ್ಲಾಧ್ಯಕ್ಷರ ಜತೆ ಸೇರಿ ಅವರು ಕಾರ್ಯಕ್ರಮದ ಸಿದ್ಥತೆ ನಡೆಸುತ್ತಾರೆ’ ಎಂದರು.
ಬೆಳ್ತಂಗಡಿ : ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಧರ್ಮಸ್ಥಳದ ಚೇತನಾ ಆಯ್ಕೆ -Vishwanews24
ಕಾಂಗ್ರೆಸ್‌ಗೆ ಪ್ರಸನ್ನಕುಮಾರ್: ‘ಪುಲಕೇಶಿನಗರದ ಕ್ಷೇತ್ರದ ಮಾಜಿ ಶಾಸಕ ಪ್ರಸನ್ನಕುಮಾರ್ ಅವರನ್ನು ಪಕ್ಷದ ಎಲ್ಲ ನಾಯಕರ ಒಪ್ಪಿಗೆ ಮೇರೆಗೆ ಪಕ್ಷಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ಶಿವಕುಮಾರ್ ಹೇಳಿದರು.
ಮಾರ್ಚ್,1ರಂದು ಶ್ರೀ ದುರ್ಗಾ ದೇವಸ್ಥಾನ ಕುಂಜೂರುವಿನಲ್ಲಿ ತ್ರಿಕಾಲ ಪೂಜೆ -Vishwanews24
