ಕಾಂತಾರ ಪ್ರಭಾವ : ರಿಯಲ್ ಕಾಂತಾರ ದೈವನರ್ತಕ ಗುಡ್ಡ ಪಾಣಾರಗೆ ಇಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ – Vishwanews24

Featured, ಉಡುಪಿ, ರಾಜ್ಯ ನ್ಯೂಸ್

ಕಾಂತಾರ ಪ್ರಭಾವ : ರಿಯಲ್ ಕಾಂತಾರ ದೈವನರ್ತಕ ಗುಡ್ಡಪಾಣಾರಗೆ ಇಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ 

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ  ಸಿನಿಮಾ ಸಿನಿಮಾ ಕೇವಲ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಮಾತ್ರವಲ್ಲ, ದೈವನರ್ತಕರ ಬಾಳಲ್ಲೂ ನಗೆ ಮೂಡಿಸಿದೆ. ಈ ಸಿನಿಮಾದ ನೋಡಿದ ನಂತರ ದೈವ ನರ್ತಕರಿಗೆ ಹಲವು ಸೌಲಭ್ಯಗಳು ಒಲಿದು ಬಂದಿವೆ.

ಇತ್ತೀಚೆಗಷ್ಟೇ ಕರ್ನಾಟಕ ಸರಕಾರವು ದೈವನರ್ತಕರಿಗೆ ಮಾಸಾಶನವನ್ನು ಘೋಷಣೆ ಮಾಡಿದ್ದರು. ಸರಕಾರದ ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು, ಇದೀಗ ಮೊದಲ ಬಾರಿಗೆ ದೈವನರ್ತಕರಿಗೂ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ. ಈ ಬಾರಿ ದೈವನರ್ತಕ ಗುಡ್ಡಪಾಣಾರಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಉಡುಪಿ ಜಿಲ್ಲೆಯ ಕಾಪುವಿನ ಗುಡ್ಡ ಪಾಣಾರು ಇಂಥದ್ದೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. ಇದನ್ನೂ ಓದಿ : ರಾಜ್ಯದ ರೈತ ಕುಟುಂಬಗಳಿಗೆ ಗುಡ್ ನ್ಯೂಸ್ ; ಇಂದಿನಿಂದ `ಯಶಸ್ವಿನಿ ಆರೋಗ್ಯ ವಿಮೆ’ ನೋಂದಣಿ ಆರಂಭ – Vishwanews24

ಉಡುಪಿಜಿಲ್ಲೆಯ ಕಾಪು ಹಳೆ ಮಾರಿಗುಡಿಯಲ್ಲಿ ಎರಡು ವರ್ಷಕೊಮ್ಮೆ ನಡೆಯುವ ಪಿಲಿಕೋಲದಲ್ಲಿ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿರುವ ಗುಡ್ಡ ಪಾಣರಿಗೆ ಜಾನಪದ ವಿಭಾಗದಲ್ಲಿ ಈ ಬಾರಿ ಪ್ರಶಸ್ತಿ ಘೋಷಣೆ ಆಗಿದ್ದು, ಇಂದು ಬೆಂಗಳೂರಿನಲ್ಲಿ ಅವರು ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಾರೆ. 68ರ ವಯಸ್ಸಿನ ಗುಡ್ಡ ಪಾಣಾರು 25ನೇ ವಯಸ್ಸಿನಿಂದಲೇ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ.

ನಾನು ಹಳ್ಳಿಯ ಬಡವ – ಧರ್ಮದ ದಾರಿಯಲ್ಲಿ ನಡೆದದ್ದಕ್ಕೆ ರಾಜ್ಯ ಪ್ರಶಸ್ತಿ ಬಂತು: ಗುಡ್ಡ  ಪಾಣಾರ ಸಂತಸ – Public TV

ಅಷ್ಟೇ ಅಲ್ಲದೇ, ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ದೈವಾರಾಧಕ ನಾಗರಾಜ ಪಾಣ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಆಗಿದೆ. ಯಾವುದೇ ಅರ್ಜಿ ಹಾಕದೇ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ ಎನ್ನುವುದು ಮತ್ತೊಂದು ವಿಶೇಷ. ಕಾಂತಾರ ಸಿನಿಮಾದಿಂದಾಗಿ ದೈವ ನರ್ತಕರು ಕೂಡ ಇದೀಗ ಮುನ್ನೆಲೆಗೆ ಬಂದಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುತ್ತಲೇ ಇತರ ಭಾಷೆಯನ್ನು ಉಳಿಸೋಣ : ಸುನೀಲ್ ಕುಮಾರ್ – Vishwanews24

 

Leave a Reply