ಕಾಪು: ಅ. 15ರಿಂದ ಅ. 17ರ ವರೆಗೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ದಾರ ನಿಧಿ ಸ್ಥಾಪನೆ, ಮುಷ್ಟಿ ಕಾಣಿಕೆ ಸಮರ್ಪಣೆ, ಮಹಾಸಂಕಲ್ಪ -Vishwanews24

Featured, ಉಡುಪಿ

ಕಾಪು: ಅ. 15ರಿಂದ ಅ. 17ರ ವರೆಗೆ ಜೀರ್ಣೋದ್ದಾರ ನಿಧಿ ಸ್ಥಾಪನೆ, ಮುಷ್ಟಿ ಕಾಣಿಕೆ ಸಮರ್ಪಣೆ, ಮಹಾಸಂಕಲ್ಪ

ಕಾಪು: ಕಾಪು ಸೀಮೆಯ ಆರಾಧ್ಯ ದೇವತೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಸುತ್ತುಪೌಳಿಯ ಜೀರ್ಣೋದ್ಧಾರದ ಪ್ರಯುಕ್ತ ಅ. 15ರಂದು ಜೀರ್ಣೋದ್ಧಾರ ನಿಧಿ ಸ್ಥಾಪನೆ – ಮುಷ್ಟಿ ಕಾಣಿಕೆ ಸಮರ್ಪಣೆ – ಮಹಾಸಂಕಲ್ಪ ಅಭಿಯಾನ ಪ್ರಾರಂಭಗೊಳ್ಳಲಿದೆ.

ದೇವಸ್ಥಾನದ ಎಂಟು ದಶಕಗಳ ಹಳೆಯ ವಾಸ್ತುವಿನ ಸುತ್ತುಪೌಳಿ ಪ್ರಸ್ತುತ ಜೀರ್ಣಾವಸ್ಥೆಯಲ್ಲಿದ್ದು ಶ್ರೀ ಸಂಸ್ಥಾನ ಕಾಶೀ ಮಠಾಧಿಪತಿ ಶ್ರೀಮತ್‌ ಸಂಯಮೀಂದ್ರತೀರ್ಥ ಶ್ರೀಪಾದರ ಆಶೀರ್ವಾದ ಮತ್ತು ಮಾರ್ಗದರ್ಶನದಂತೆ ಸುತ್ತುಪೌಳಿಯ ಸಮಗ್ರ ಜೀರ್ಣೋದ್ಧಾರಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ.

ಶಿರ್ವ: ನಾಪತ್ತೆಯಾದ ಯುವತಿ ಮೃತದೇಹ ಪಾಪನಾಶಿನಿ ನದಿಯಲ್ಲಿ ಪತ್ತೆ – Vishwanews24

ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕಾಪು ಪೇಟೆಯ ಹತ್ತು ಸಮಸ್ತರು ನವರಾತ್ರಿಯ ಮೊದಲ ದಿನ ಬೆಳಗ್ಗೆ ಒಡೆಯ ವೆಂಕಟರಮಣ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಬಳಿಕ ಬೆಳಗ್ಗೆ 9 ಗಂಟೆಗೆ ಮಾರಿಯಮ್ಮ ದೇವಸ್ಥಾನದಲ್ಲಿ ಜೀರ್ಣೋದ್ಧಾರ ನಿಧಿ ಸ್ಥಾಪನೆ, ಮುಷ್ಟಿ ಕಾಣಿಕೆ ಸಮರ್ಪಣೆ, ಮಹಾ ಸಂಕಲ್ಪಕ್ಕೆ ಚಾಲನೆ ನೀಡಲಿದ್ದಾರೆ.

ಅ. 17ರ ವರೆಗೆ ಮುಷ್ಟಿ ಕಾಣಿಕೆ ಸಮರ್ಪಣೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಪ್ರಸಾದ್‌ ಗೋಕುಲ್‌ದಾಸ್‌ ಶೆಣೈ ಮತ್ತು ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.

ಶಿರ್ವ: ನಾಪತ್ತೆಯಾದ ಯುವತಿ ಮೃತದೇಹ ಪಾಪನಾಶಿನಿ ನದಿಯಲ್ಲಿ ಪತ್ತೆ – Vishwanews24

Leave a Reply