ಕಾಪು: ಅಕ್ರಮ ಮರಳು ಸಾಗಾಟ- ಟೆಂಪೋ ಸಹಿತ ಮೂವರ ಬಂಧನ – Vishwanews24

Featured, ಉಡುಪಿ

ಕಾಪು: ಅಕ್ರಮ ಮರಳು ಸಾಗಾಟ- ಟೆಂಪೋ ಸಹಿತ ಮೂವರ ಬಂಧನ

ಕಾಪು: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರೋಪದಲ್ಲಿ ಮೂವರನ್ನು ಟೆಂಪೋ ಸಹಿತ ಕಾಪು ಪೊಲೀಸರು ಬಂಧಿಸಿರುವ ಘಟನೆ ಸೆ.14ರಂದು ಮಣಿಪುರ ಗ್ರಾಮದ ದೆಂದೂರುಕಟ್ಟೆ ಎಂಬಲ್ಲಿ ನಡೆದಿದೆ.

ಚಾಲಕ ಕರಂಬಳ್ಳಿಯ ನಜೀರ್(42), ಕುರ್ಕಾಲಿನ ಜೀವನ್ ಶೆಟ್ಟಿ(38) ಹಾಗೂ ಮಿಥುನ್ ಶೆಟ್ಟಿ(32) ಬಂಧಿತ ಆರೋಪಿಗಳು.

ಜೀವನ್ ಶೆಟ್ಟಿ ಇತ್ತೀಚೆಗೆ ಪಾಂಗಾಳ ಹೊಳೆಯಲ್ಲಿ ಮರಳನ್ನು ತೆಗೆಸಿ ಅವರ ಜಾಗದಲ್ಲಿ ಸಂಗ್ರಹ ಮಾಡಿ ಇಟ್ಟುಕೊಂಡಿದ್ದು, ಅದನ್ನು ಟೆಂಪೋದಲ್ಲಿ ತುಂಬಿಸಿ ಸಾಗಿಸುತ್ತಿದ್ದಾಗ ಕಾಪು ಎಸ್ಸೈ ಅಬ್ದುಲ್ ಖಾದರ್ ನೇತೃತ್ವದ ತಂಡ ದಾಳಿ ನಡೆಸಿದೆ.

ಮರಳು ಸಾಗಿಸುತ್ತಿದ್ದ 407ಟೆಂಪೋ ಮತ್ತು ಅದರಲ್ಲಿದ್ದ 9,000ರೂ. ಮೌಲ್ಯದ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply