ಕಾಪು : ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ – vishwanews24

Featured, ಉಡುಪಿ

ಕಾಪು : ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ

ಕಾಪು : ಆನ್‌ಲೈನ್ ಟ್ರೇಡಿಂಗ್ ಹಣವನ್ನು ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಾವರ ಪಿತ್ರೋಡಿಯ ಅಶೋಕ್ ಆರ್.(42) ಎಂಬವವರಿಗೆ ಸುಮಾರು 3 ವರ್ಷಗಳಿಂದ ಆನ್‌ಲೈನ್ ಟ್ರೇಡಿಂಗ್ ವಾಟ್ಸ್ಪ್ ಗ್ರೂಪ್ ಮೂಲಕ ಆರೋಪಿ ರಾಜ್ಕುಮಾರ್ ಎಂಬಾತನ ಪರಿಚಯ ಇದ್ದು, ಆತ ಡಿ.3ರಂದು ಅಶೋಕ್ ಅವರಿಗೆ ಕರೆ ಮಾಡಿ 1,33,589 ರೂ. ಹಣವನ್ನು ತನ್ನ ಖಾತೆಗೆ ಜಮಾ ಮಾಡುವಂತೆ ತಿಳಿಸಿದಂತೆ ಅಶೋಕ್ ಹಣವನ್ನು ಹಾಕಿದ್ದರು.

ಉಡುಪಿ: 10 ಬಾಂಗ್ಲಾ ಅಕ್ರಮ ವಲಸಿಗರಿಗೆ 10,000 ರೂ. ದಂಡ ; ಎರಡು ವರ್ಷ ಜೈಲು ಶಿಕ್ಷೆ  – vishwanews24

ಆದರೆ ಆರೋಪಿ ಆನ್‌ಲೈನ್ ಟ್ರೇಡಿಂಗ್ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಪಡೆಯಬಹುದು ಎಂಬುದಾಗಿ ನಂಬಿಸಿ ಅಶೋಕ್ ಅವರಿಂದ ಒಟ್ಟು 1,33,589 ರೂ. ಹಣವನ್ನು ಪಡೆದು ವಂಚಿಸಿರುವುದಾಗಿ ದೂರಲಾಗಿದೆ.

ಪಡುಬಿದ್ರಿ : ಭೀಕರ ರಸ್ತೆ ಅಪಘಾತ ; ಮಂಗಳೂರು ಹೆಸರಾಂತ ಗೌಜಿ ಇವೆಂಟ್‌ ಮಾಲೀಕ ಸಾವು – vishwanews24

Leave a Reply