ಕಾಪು : ಕಾಂಗ್ರೆಸ್ ಮತ್ತು SDPI ಮೈತ್ರಿಯ ಹೊರತಾಗಿಯೂ ಉಪಾಧ್ಯಕ್ಷ ಸ್ಥಾನ ಉಳಿಸುವಲ್ಲಿ ಯಶಸ್ವಿಯಾದ ಬಿಜೆಪಿ – vishwanews24
ಕಾಂಗ್ರೆಸ್ ಮತ್ತು SDPI ಮೈತ್ರಿಯ ಹೊರತಾಗಿಯೂ ಉಪಾಧ್ಯಕ್ಷ ಸ್ಥಾನ ಉಳಿಸುವಲ್ಲಿ ಯಶಸ್ವಿಯಾದ ಬಿಜೆಪಿ
ಬಿಜೆಪಿ ಪಕ್ಷವು ಪರಿಶಿಷ್ಟ ಜಾತಿಯ ಮಹಿಳೆಯನ್ನು ಕಾಪು ಪುರಸಭೆಯ ಉಪಾಧ್ಯಕ್ಷೆಯನ್ನಾಗಿಸಿರುವುದನ್ನು ಸಹಿಸದ ಕಾಂಗ್ರೆಸಿಗರಿಂದ ಅನಗತ್ಯ ಟೀಕೆ
ಎಸ್.ಡಿ.ಪಿ.ಐ ಪಕ್ಷವು ಕಾಂಗ್ರೆಸ್ನೊಂದಿಗೆ ಮಾತುಕತೆಯನ್ನು ನಡೆಸಿ ಹೊಂದಾಣಿಕ ಮಾಡಿಕೊಂಡು ಸರಿತಾ ಅವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಈ ಚುನಾವಣೆಯಲ್ಲಿ ಬೆಂಬಲಿಸುವಂತೆ ವಿಪ್ ನೋಟೀಸ್ ನೀಡಿರುತ್ತಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ಒಪ್ಪದೆ ಎಸ್.ಡಿ.ಪಿ.ಐ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿ ಎಸ್.ಡಿ.ಪಿ.ಐ ಪಕ್ಷದಿಂದ ಹೊರಬಂದು ಬಿಜೆಪಿ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡ ನಂತರವೇ ಸರಿತಾರವರಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಪಕ್ಷ ಅವಕಾಶವನ್ನು ನೀಡಿರುವಂತಹದ್ದು ಇದು ಎಸ್.ಡಿ.ಪಿ.ಐ ನೊಂದಿಗೆ ಮೈತ್ರಿ .ಹೇಗಾಗುತ್ತದೆ?
ಬಳ್ಳಾರಿ ಜೈಲಿನಲ್ಲಿ ದರ್ಶನ್ : ಸೆಲೆಬ್ರೆಟಿಗಳಿಗೆ ಭೇಟಿಗೆ ಅವಕಾಶ ಇಲ್ಲ – vishwanews24
ಸರಿತಾರವರು ಪುರಸಭಾ ಉಪಾಧ್ಯಕ್ಷೆಯಾದದ್ದು ಬಿಜೆಪಿ ಪಕ್ಷದ ಬೆಂಬಲಿತ ಪುರಸಭಾ ಸದಸ್ಯರ ಮತಗಳಿಂದ ಹೊರತು ಎಸ್.ಡಿ.ಪಿ.ಐ ಸದಸ್ಯರ ಮತಗಳಿಂದಲ್ಲ.
ಎಸ್.ಡಿ.ಪಿ.ಐ ಬೆಂಬಲಿತ ಇಬ್ಬರೂ ಪುರಸಭಾ ಸದಸ್ಯರ ಮತವನ್ನು ಪಡೆದದ್ದು ಕಾಂಗ್ರೆಸ್ ಅಭ್ಯರ್ಥಿ..

ಬಂಟ್ವಾಳದಲ್ಲಿ ನಡೆದ ಪುರಸಭಾ ಮೈತ್ರಿಯಂತೆ ಇಲ್ಲಿಯೂ ಕಾಂಗ್ರೆಸನ್ನು ಬೆಂಬಲಿಸಿತ್ತು ಎಸ್.ಡಿ.ಪಿ.ಐ ಪಕ್ಷ
ಒಂದೆಡೆ ಎಸ್.ಡಿ.ಪಿ.ಐ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿ ವಿಫಲವಾಯಿತೂ ಇನ್ನೊಂದೆಡೆಯಲ್ಲಿ ಪುರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ತಂತ್ರಗಾರಿಕೆಯನ್ನರಿಯದೆ ಈ ಚುನಾವಣೆಯಲ್ಲಿ ಸೋತು ಮುಖಭಂಗಕ್ಕೀಡಾಯಿತು ಕಾಂಗ್ರೆಸ್
ಪರಿಶಿಷ್ಟ ಜಾತಿಯ ಮಹಿಳೆಗೆ ತನ್ನ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ನೀಡಿ ಉಪಾಧ್ಯಕ್ಷ ಸ್ಥಾನವನ್ನು ನೀಡಿರುವ ಬಿಜೆಪಿ ಪಕ್ಷದ ನಿಲುವನ್ನು ಟೀಕಿಸುತ್ತಿರುವ ಕಾಂಗ್ರೆಸಿಗರೇ ನೀವು 7 ಸ್ಥಾನ ಹೊಂದಿದ್ದು ಎಸ್.ಡಿ.ಪಿ.ಐ ಇಬ್ಬರು ಸದಸ್ಯರ ಮತ ಸೇರಿ 9 ಮತ ಪಡೆದು ಸಾರ್ವಜನಿಕವಾಗಿ ಎಸ್.ಡಿ.ಪಿ.ಐ ಮತ್ತು ಕಾಂಗ್ರೆಸ್ ಮರೆಮಾಚಲು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ವಿಷಾದನೀಯ..
ಕಾರ್ಕಳ : ಯುವತಿ ಅತ್ಯಾಚಾರ ಪ್ರಕರಣ ; ಮತ್ತಿಬ್ಬರು ಆರೋಪಿಗಳ ಬಂಧನ – vishwanews24
ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಪಕ್ಷ ಮೈತ್ರಿ ಇದ್ದರೂ ಪುರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ವಿಫಲವಾಗಿಯೂ ಸುಳ್ಳು ಸುದ್ದಿ ಹರಡುತ್ತಿರುವುದು ಖಂಡನೀಯ ಎಂದು ಬಿಜೆಪಿ ಪ್ರಕಟನೆಯಲ್ಲಿ ತಿಳಿಸಿದೆ.
