ಕಾಪು : ಕೋವಿಡ್ ನಿಯಮಗಳನ್ನು ಪಾಲಿಸಿ ಸರಳ ರೀತಿಯಲ್ಲಿ ಬಕ್ರೀದ್ ಆಚರಣೆ -Vishwanews24

Featured, ಉಡುಪಿ

ಕಾಪು : ಕೋವಿಡ್ ನಿಯಮಗಳನ್ನು ಪಾಲಿಸಿ ಸರಳ ರೀತಿಯಲ್ಲಿ ಬಕ್ರೀದ್ ಆಚರಣೆ -Vishwanews24

ಕಾಪು : ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರಿಂದ ಬಕ್ರೀದ್ ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಸರಳ ರೀತಿಯಲ್ಲಿಆಚರಿಸಲಾಯಿತು.

ಸರಕಾರದ ಕೊರೊನ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸೀಮಿತ ಸಂಖ್ಯೆಯ ಭಕ್ತಾದಿಗಳು ಮಸೀದಿಯಲ್ಲಿ ಸಾಮಾಜಿಕ ಅಂತರ ಪಾಲಿಸಿಕೊಂಡು ಪ್ರಾರ್ಥನೆ ಸಲ್ಲಿಸಿದರು. ಕಾಪುವಿನ ಖಾಝಿ ಅಲ್ ಹಜ್ ಪಿ. ಬಿ. ಅಹಮದ್ ಮುಸ್ಲಿಯಾರ್ ಶುಭ ಸಂದೇಶ ನೀಡಿದರು.

ಈ ಸಂದರ್ಭ ಪೊಲಿಪು ಜಾಮಿಯಾ ಮಸೀದಿಯ ಆಡಳಿತ ಮಂಡಳಿಯ ಸದಸ್ಯ ಅಮೀರ್ ಹಂಝ ಮಾತನಾಡಿ ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಸರಕಾರ ಜಾರಿ ಮಾಡಿರುವ ಕೋವಿಡ್ ನಿಯಮಗಳನ್ನು ಪಾಲಿಸಿ ಕೊಂಡು ಸೀಮಿತ ಸಂಖ್ಯೆಯ ಭಕ್ತಾದಿಗಳು ಸೇರಿಕೊಂಡು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ಹಬ್ಬ ಇದಾಗಿದ್ದು ,ಪ್ರತಿಯೊಬ್ಬ ಮುಸಲ್ಮಾನನು ತ್ಯಾಗದ ಮನೋಭಾವನೆಯನ್ನು ಅಳವಡಿಸಿ ಕೊಂಡು ಜೀವನ ನಡೆಸ ಬೇಕಿದೆ ಎಂದರು.