ಕಾಪು ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇರಬಾರದು ಅನ್ನೋ ಮಹದಾಸೆ ನನ್ನದು : ವಿನಯ್ ಕುಮಾರ್ ಸೊರಕೆ – Vishwanews24
ದೇವಸ್ಥಾನದ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಸೊರಕೆ ಆಕ್ರೋಶ
ಕಾಪು: ದೇವರು ಧರ್ಮ ಅಂತಾ ಮಾತಾಡೋ ಬಿಜೆಪಿ ನಾಯಕರು ಇಂದು ದೇವಸ್ಥಾನದ ವಿಷಯದಲ್ಲಿ ಹೀನಾಯ ರಾಜಕೀಯ ಮಾಡೋಕೆ ಶುರು ಮಾಡಿದ್ದಾರೆ ಅಂತಾ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರಿಯಡ್ಕ ಪೇಟೆಯಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇವಸ್ಥಾನ ಧರ್ಮ ಅಂತಾ ಯುವಜನತೆಗೆ ಪಾಠ ಹೇಳುವ ಬಿಜೆಪಿ ರಾಜಕೀಯ ನಾಯಕರು ಹಿರಿಯಡ್ಕ ವೀರಭದ್ರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ವಿಚಾರದಲ್ಲಿ ಮತ್ತು ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನದ ರಸ್ತೆ ಅಗಲೀಕರಣ ವಿಷಯದಲ್ಲಿ ರಾಜಕೀಯ ಮಾಡಿ ದೇವಸ್ಥಾನದ ವಾಸ್ತುವಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ನನ್ನ ಶಾಸಕತ್ವದ ಅವಧಿಯಲ್ಲಿ ಹಿರಿಯಡ್ಕ ವ್ಯಾಪ್ತಿಯಲ್ಲಿ 800 ಅಕ್ರಮ ಸಕ್ರಮದ ಮನೆ ನಿವೇಶನ ಶಿಫಾರಸು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಪ್ರತೀ ಪಂಚಾಯತ್ ನಲ್ಲಿ ಬಹಳಷ್ಟು ಅರ್ಜಿಯ ಗಂಟಿದೆ. ಆ ಗಂಟು ಬಿಚ್ಚೋ ಕೆಲಸವನ್ನು ಮಾಡಬೇಕಿದೆ.ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇನೆ.
ಹಿರಿಯಡ್ಕದಲ್ಲಿ ನಾಡ ಕಚೇರಿ ಸ್ಥಾಪನೆಯ ಅಗತ್ಯತೆ ಇದೆ. ಕಾಪು ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇರಬಾರದು ಅನ್ನೋ ಮಹದಾಸೆ ನನ್ನದು ಹೀಗಾಗಿ ಮಣಿಪುರದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕೆಲಸ ಆರಂಭವಾಗಿದೆ ಅಂತಾ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
