ಕಾಪು: ಗಾಂಜಾ ಸೇವನೆ – ಓರ್ವ ವಶ :-Vishwanews24

Featured, ಉಡುಪಿ

ಕಾಪು: ಗಾಂಜಾ ಸೇವನೆ – ಓರ್ವ ವಶ

ಕಾಪು : ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಉದ್ಯಾವರ ಗ್ರಾಮದ ಸಂಪಿಗೆನಗರ ಕ್ರಾಸ್ ಬಳಿ ಓರ್ವನನ್ನು ಕಾಪು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.

ಕಾಪು ಠಾಣಾ ಪೊಲೀಸರು ರೌಂಡ್ಸ್‍ಕರ್ತವ್ಯದಲ್ಲಿರುವಾಗ ಠಾಣಾ ವ್ಯಾಪ್ತಿಯ ಉದ್ಯಾವರ ಗ್ರಾಮದ ಸಂಪಿಗೆ ನಗರ ಕ್ರಾಸ್ ಬಳಿ ಮಾದಕ ವಸ್ತು ಸೇವನೆಯ ನಶೆಯಲ್ಲಿರುವ ಅನುಮಾನದ ಮೇರೆಗೆ ಮಹಮ್ಮದ್ ಅನಸ್ ಸಾಹೇಬ (25) ಎಂಬಾತನನ್ನು ವಶಕ್ಕೆ ಪಡೆದು ಆತನನ್ನು ಮಣಿಪಾಲದ ಫಾರೆನ್ಸಿಕ್ ವಿಭಾಗದಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು. ಈತನ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಕಾರಣ ಈತನ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಮೆಂಟ್ ಹಾಸು ಕುಸಿದು ದೇವಸ್ಥಾನದ ಬಾವಿಯೊಳಗೆ ಬಿದ್ದ ಭಕ್ತರು -ಸಾವಿನ ಸಂಖ್ಯೆ 35 ಕ್ಕೆ ಏರಿಕೆ – Vishwanews24

Leave a Reply