ಕಾಪು : ಚಾಲಕನ ನಿಯಂತ್ರಣ ತಪ್ಪಿ ಗೂಡಂಗಡಿಗೆ ಡಿಕ್ಕಿ ಹೊಡೆದ ಲಾರಿ – Vishwanews24
ಕಾಪು : ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಪಂಪ್ ಬಳಿ ಗೂಡಂಗಡಿಗೆ ಡಿಕ್ಕಿ ಹೊಡೆದ ಲಾರಿ..
ಡಿಕ್ಕಿಯ ರಭಸಕ್ಕೆ ಅಂಗಡಿ ನಜ್ಜು ಗುಜ್ಜು..
ಅಂಗಡಿಯಲ್ಲಿದ್ದ ಮಾಲೀಕರು ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರು..
ಘಟನ ಸ್ಥಳಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್ ಭೇಟಿ..
ಕಾಪು: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಯ ಗೂಡಂಗಡಿಯೊಂದಕ್ಕೆ ಗುದ್ದಿದ ಘಟನೆ ಕಾಪು ಪೆಟ್ರೋಲ್ ಪಂಪ್ ಬಳಿ ನಡೆದಿದೆ.
ಪಡುಬಿದ್ರಿಯಿಂದ ಉಡುಪಿ ಕಡೆ ತೆರಳುತ್ತಿದ್ದ ಲಾರಿ ಕಾಪು ಪೆಟ್ರೋಲ್ ಪಂಪ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅಂಗಡಿ ನಜ್ಜು ಗುಜ್ಜಾಗಿದ್ದು, ಅಂಗಡಿಯಲ್ಲಿದ್ದ ಮಾಲೀಕರು ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.




ಘಟನ ಸ್ಥಳಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್, ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಪ್ರತಿ ಕುಟುಂಬದ ಗೃಹಣಿಗೆ ಪ್ರತಿ ತಿಂಗಳು ₹2,000 ಆರ್ಥಿಕ ನೆರವು : ಪ್ರಿಯಾಂಕ ಗಾಂಧಿ – Vishwanews24
Join our Whatsapp group by clicking the below link 👇👇
