ಕಾಪು ಜೇಸಿಐ ಸಭಾ ಭವನದಲ್ಲಿ ವಿಶೇಷ ಚೇತನರಿಗೆ ಕೃತಕ ಅವಯವ ಉಪಕರಣಗಳ ವಿತರಣೆ -Vishwanews24

Featured, ಉಡುಪಿ

ಕಾಪು ಜೇಸಿಐ ಸಭಾ ಭವನದಲ್ಲಿ ವಿಶೇಷ ಚೇತನರಿಗೆ ಕೃತಕ ಅವಯವ ಉಪಕರಣಗಳ ವಿತರಣೆ -Vishwanews24

ಕಾಪು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್, ಕೃತಕ ಅಂಗಾಂಗ ತಯಾರಿಕೆ ಸಂಸ್ಥೆ ( ಅಲಿಂಕೋ) ಜಿಲ್ಲಾಡಳಿತ ಜಿಲ್ಲಾ ವಿಶೇಷ ಚೇತನ ಪುನರ್ವಸತಿ ಕೇಂದ್ರ ರೆಡ್ ಕ್ರಾಸ್ ಸೊಸೈಟಿ ಉಡುಪಿ ಮತ್ತು ಜೇಸಿಐ ಕಾಪು ಸಹಯೋಗದಲ್ಲಿ ಕಾಪು ಜೇಸಿಐ ಸಭಾ ಭವನದಲ್ಲಿ ವಿಶೇಷ ಚೇತನರಿಗೆ ಕೃತಕ ಅವಯವ ಉಪಕರಣಗಳ ವಿತರಣೆ ಜರುಗಿತು.

ಈ ಸಂದರ್ಭ ಮಾತನಾಡಿದ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ವಿಶೇಷಚೇತನರನ್ನು ಯಾರೂ ನಿರ್ಲಕ್ಷಿಸಬಾರದು. ಅವರು ಸಾಕಷ್ಟು ಪ್ರತಿಭಾ ಸಂಪನ್ನರಾಗಿದ್ದು, ಸಾಧನೆಯ ಮುಂಚೂಣಿಯಲ್ಲಿದ್ದಾರೆ. ಹಿರಿಯರು ಹಾಗೂ ವಿಶೇಷಚೇತನರನ್ನು ಗೌರವಿಸಿ, ಅವರ ಸೇವೆಗೈಯ್ಯುವ ಮನಸ್ಸು ನಮ್ಮದಾಗಬೇಕೆಂದು ಹೇಳಿದರು.

ಜಿಲ್ಲೆಯ ಒಟ್ಟು ಆರು ತಾಲೂಕುಗಳಲ್ಲಿ ಸುಮಾರು 512 ಫಲಾನುಭವಿಗಳಿಗೆ 45 ಲಕ್ಷ ರೂ. ವೆಚ್ಚದ ಸಲಕರಣೆ ವಿತರಿಸಲಾಗಿದ್ದು, ಕಾಪುವಿನಲ್ಲಿ 25 ವಿಶೇಷಚೇತನರಿಗೆ ಕೃತಕ ಉಪಕರಣ ವಿತರಿಸಲಾಯಿತು.

ಪುರಸಭೆ ಸದಸ್ಯರಾದ ಸುರೇಶ್ ದೇವಾಡಿಗ ಸಭಾಧ್ಯಕ್ಷತೆ ವಹಿಸಿದ್ದರು. ಚಂದ್ರ ನಾಯಕ, ಶಾರದೇಶ್ವರಿ ಗುರ್ಮೆ,ನೋಡಲ್ ಅಧಿಕಾರಿ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಜೇಸಿಐ ರಾಕೇಶ್ ಕುಂಜೂರು ನಿರೂಪಿಸಿದರು.