ಕಾಪು ತಾಲೂಕಿನ ಏಳು ಕೇಂದ್ರಗಳಲ್ಲಿ ಗುರುವಾರ ಎಸ್ಸೆಸೆಲ್ಸಿ ಪರೀಕ್ಷೆ ಆರಂಭಗೊಂಡಿದ್ದು 1716 ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು.vishwanews24

Featured, ಉಡುಪಿ

ಕಾಪು ತಾಲೂಕಿನ ಏಳು ಕೇಂದ್ರಗಳಲ್ಲಿ ಗುರುವಾರ ಎಸ್ಸೆಸೆಲ್ಸಿ ಪರೀಕ್ಷೆ

ಆರಂಭಗೊಂಡಿದ್ದು 1716 ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು.

ಕಾಪು : ತಾಲೂಕಿನ ಏಳು ಕೇಂದ್ರಗಳಲ್ಲಿ ಗುರುವಾರ ಎಸ್ಸೆಸೆಲ್ಸಿ ಪರೀಕ್ಷೆ ಆರಂಭಗೊಂಡಿದ್ದು 1716 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ತಾಲೂಕಿನ ಕಟಪಾಡಿ ಎಸ್.ವಿ.ಎಸ್ 281, ಅದಮಾರು ಪೂರ್ಣಪ್ರಜ್ಞ 242, ಶಿರ್ವ ಸಂತ ಮೇರಿ 200, ಪೊಲಿಪು ಜೂನಿಯರ್ ಕಾಲೇಜು 361, ಶಿರ್ವ ಹಿಂದೂ ಜೂನಿಯರ್ ಕಾಲೇಜ್ 180, ಹೆಜಮಾಡಿ ಜೂನಿಯರ್ ಕಾಲೇಜು 192, ಇನ್ನಂಜೆ ಎಸ್.ವಿ.ಎಚ್. ಜೂನಿಯರ್ ಕಾಲೇಜು 280 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಪ್ರತೀ ಪರೀಕ್ಷಾ ಕೇಂದ್ರಗಳಲ್ಲೂ ಸ್ಯಾನಿಟೈಸೇಷನ್, ಥರ್ಮಲ್ ಸ್ಕ್ರೀನಿಂಗ್ ಮತ್ತು ಸಾಮಾಜಿಕ ಅಂತರ ಪಾಲನೆಗೆ ವಿಶೇಷ ವ್ಯವಸ್ಥೆ ಮಾಡಿಕೊಡಲಾಗಿದೆ ಹಾಗೂ ಪ್ರತೀ ಪರೀಕ್ಷಾ ಕೇಂದ್ರಗಳಲ್ಲಿ ಕನಿಷ್ಟ 15 ರಿಂದ ಗರಿಷ್ಟ 25 ಮಂದಿ ಸಿಬಂದಿಗಳು ಕರ್ತವ್ಯಕ್ಕೆ ನಿಯೋಜಿತರಾಗಿದ್ದು, ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಸಿಬಂದಿಗಳು ವಿದ್ಯಾರ್ಥಿಗಳ ಜ್ವರ ಪರೀಕ್ಷೆ, ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬಂದಿಗಳು ಬಂದೋಬಸ್ತ್ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿದ್ದಾರೆ.