ಕಾಪು ದಿವಾಕರ ಶೆಟ್ಟಿ ನೇತೃತ್ವ-ಉಳಿಯಾರಗೋಳಿ‌ ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಪೂರೈಸು ಸದಸ್ಯರಿಗೆ ಕಿಟ್ ವಿತರಣೆ.vishwanews24

Featured, ಉಡುಪಿ

ಕಾಪು: ಉಳಿಯಾರಗೋಳಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸಂಘಕ್ಕೆ ಸಕ್ರಿಯವಾಗಿ ಹಾಲು ಪೂರೈಸುವ ಸದಸ್ಯರಿಗೆ ದಿನಸಿ ಸಾಮಾಗ್ರಿಗಳ ಕಿಟ್   ವಿತರಣಾ ಕಾರ್ಯಕ್ರಮವು ಮೇ 3ರಂದು ದಂಡತೀರ್ಥ ಶಾಲಾ ಮೈದಾನದಲ್ಲಿ ನಡೆಯಿತು.

ಉಳಿಯಾರಗೋಳಿ ಹಾಲು ಉತ್ಪಾದಕರ ಸಹಕಾರ ಸ‌ಂಘದ ಅಧ್ಯಕ್ಷ,ಕರ್ನಾಟಕ ರಾಜ್ಯ ಹಾಲು ಮಹಾ ಮಂಡಳದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಅವರ ನೇತೃತ್ವದಲ್ಲಿ150ಕ್ಕೂ ಅಧಿಕ ಮಂದಿ ಸದಸ್ಯರಿಗೆ ಪಡಿತರ ಕಿಟ್ ವಿತರಿಸಲಾಯಿತು.

 

ಕಾಪು ತಾಲೂಕು ಕಂದಾಯ ನಿರೀಕ್ಷಕ ರವಿಶಂಕರ್, ಕಾಪು ಎಎಸ್ಸೈ ರಾಜೇಂದ್ರ ಮಣಿಯಾಣಿ, ದ.ಕ. ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ ಅನಿಲ್ ಕುಮಾರ್ ಶೆಟ್ಟಿ, ಡಾ. ಕೃಷ್ಣಮೂರ್ತಿ ಉಪಾಧ್ಯಾಯ, ವಿಸ್ತರಣಾಧಿಕಾರಿ ಯಶವಂತ್, ಸಂಘದ ಉಪಾಧ್ಯಕ್ಷ ಎಂ. ರವೀಂದ್ರ, ಕಾರ್ಯ ನಿರ್ವಹಣಾಧಿಕಾರಿ ರಾಘು ಎಚ್.,
ರಾಧಾರಮಣ ಶಾಸ್ತ್ರಿ, ಪುರಸಭೆ ಸದಸ್ಯ ಸುರೇಶ್ ದೇವಾಡಿಗ, ಹರೀಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.