ಕಾಪು: ದೇವಸ್ಥಾನದ ಕೆರೆಯಲ್ಲಿ ಯುವಕನ ಶವ ಪತ್ತೆ – Vishwanews24

Featured, ಉಡುಪಿ

 ಕಾಪು: ದೇವಸ್ಥಾನದ ಕೆರೆಯಲ್ಲಿ ಯುವಕನ ಶವ ಪತ್ತೆ

ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಉಂಡಾರು ದೇವಸ್ಥಾನದ ಕೆರೆಯಲ್ಲಿ ಯುವಕನ ಶವ ಪತ್ತೆಯಾಗಿದೆ.

ಮೃತ ಯುವಕನನ್ನು ಪಡುಬಿದ್ರಿ ನಿವಾಸಿ ವಿನಯ್ ರಾವ್ (26)ಎಂದು ಗುರುತಿಸಲಾಗಿದೆ.

ಈತ ಗುರುವಾರ ರಾತ್ರಿ 12 ಗಂಟೆ ವೇಳೆಗೆ ದೇವಸ್ಥಾನದ ಬಳಿ ತಿರುಗಾಡುತ್ತಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಪತ್ತೆಯಾಗಿದೆ. ಹಾಗಾಗಿ ಈತ ದೇವಸ್ಥಾನದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಉಡುಪಿ : ಅಭಿವೃದ್ಧಿ ಮಾಡುವ ಬಜೆಟ್ ಅಲ್ಲ ಖರ್ಚು ಮಾಡುವ ಬಜೆಟ್ : ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ – Vishwanews24

ಇನ್ನು ಕಾಪು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಡುಪಿಗೆ ಕೊಂಡೊಯ್ದಿದ್ದಾರೆ.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ, ತನಿಖೆ ನಡೆಯುತ್ತಿದೆ.

Leave a Reply