ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ನವೀನ್ ಎಸ್.ಕೆ ಹೆಸರು ಬಹುತೇಕ ಫೈನಲ್..!

Featured, ಉಡುಪಿ

ಕಾಪು: ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿರುವ ಸಮಯದಲ್ಲಿಯೇ ಬಿಜೆಪಿ‌ ಬೆಂಬಲಿತ ನವೀನ್ ಎಸ್.ಕೆ ಹೆಸರು ಬಹುತೇಕ ಫೈನಲ್ ಗೊಂಡಿರುವ ವಿಚಾರ ಹರಿದಾಡುತ್ತಿದೆ.

ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಶಿಫಾರಸ್ಸಿನ‌ಂತೆ ಈ‌ ಹೆಸರು ಫೈನಲ್ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಮುಂದಿನ ವಾರ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಳೆದ 29 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯ ಸಕ್ರೀಯ ಸದಸ್ಯನಾಗಿ ಗುರುತಿಸಿಕೊಂಡಿದ್ದ ನವೀನ್ ಎರಡು ಭಾರಿ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚ ಉಪಾಧ್ಯಕ್ಷರಾಗಿ,ಎರಡು ಬಾರಿ ಕಾಪು ಮಂಡಳ ಬಿಜೆಪಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಪಕ್ಷ ಸಂಘಟನೆಯಲ್ಲಿ ವಿಶೇಷ ಪಾತ್ರ ವಹಿಸಿದ್ದರು.