ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿಕ್ರಮ್ ಕಾಪು – vishwanews24

Featured, ಉಡುಪಿ

ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಮ್ ಕಾಪು , ಸದಸ್ಯರಾಗಿ ಹರೀಶ್ ನಾಯಕ್,ಲಕ್ಷ್ನೀಶ ತಂತ್ರಿ,ಮ.ಸಾಧಿಕ್  ಅಧಿಕಾರ ಸ್ವೀಕಾರ

ಪ್ರಾಧಿಕಾರ ಕಚೇರಿಯಲ್ಲಿ ಇನ್ಮುಂದೆ ಬ್ರೋಕರ್ ನೋ ಎಂಟ್ರಿ

ಬಾಕಿಯಿರುವ ಕಡತಗಳ ತುರ್ತು ವಿಲೇವಾರಿಗೆ ಕ್ರಮ : ಅಧ್ಯಕ್ಷರ ಭರವಸೆ

ಕಾಪು: ಕಾಪು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ವಿಕ್ರಮ್ ಕಾಪು,ಸದಸ್ಯರಾಗಿ ಹರೀಶ್ ನಾಯಕ್,ಲಕ್ಷ್ನೀಶ ತಂತ್ರಿ,ಮ.ಸಾಧಿಕ್ ಅಧಿಕಾರ ಸ್ವೀಕರಿಸಿದರು.

ತದನಂತರ ಅಧ್ಯಕ್ಷರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ” ಕಳೆದ ಎರಡು ಅವಧಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಕಾಪು ದಿವಾಕರ ಶೆಟ್ಟಿ, ಸುಧಾಮ ಶೆಟ್ಟಿ ಉತ್ತಮ ಕೆಲಸವನ್ನು ಮಾಡಿದ್ದಾರೆ ,ಇವತ್ತು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರ ಶಿಫಾರಸ್ಸಿನ ಮೇರೆಗೆ ಸರ್ಕಾರ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ ಸದಸ್ಯರನ್ನು ನೇಮಕ ಮಾಡಿದೆ , ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಕೆಲಸವನ್ನು ಅತ್ಯಂತ ಸುಲಭವಾಗಿ ಯಾವುದೇ ಬ್ರೋಕರ್ ಗಳ ಮಧ್ಯವರ್ತಿಯಿಲ್ಲದೆ ನಡೆಸಲು ಪ್ರಯತ್ನ ಮಾಡಲಾಗುವುದು ಮಾತ್ರವಲ್ಲದೆ ಇದುವರೆಗೆ ಬಾಕಿಯಿರುವ ಕಡತಗಳ ತುರ್ತು ವಿಲೇವಾರಿಗೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ,ಪುರಸಭಾ ಸದಸ್ಯರು, ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ ಕಾಪು,ಅಶೋಕ ಶೆಟ್ಟಿ ಕೊಡವೂರು,ಸುಕುಮಾರ್ ಪಡುಬಿದ್ರಿ,ಎಂ.ಎ.ಗಫೂರ್,ಹರೀಶ್ ಕಿಣಿ,ನವಿನ್ಚಂದ್ರ ಸುವರ್ಣ ಅಡ್ವೆ,ಅಧಿಕಾರಿಗಳಾದ ಶ್ರೀಮತಿ ಶ್ರುತಿ,ಮುಖ್ಯಾಧಿಕಾರಿ ನಾಗರಾಜ ಚಿಕ್ಕಳಪರವಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಹೆಬ್ರಿ: ಕಾರು ಢಿಕ್ಕಿ ; ಚಿಕಿತ್ಸೆ ಫಲಿಸದೆ ಬೈಕ್ ಸವಾರ ಸಾವು – vishwanews24

Leave a Reply