ಕಾಪು ನಗರಭಾಗದಲ್ಲಿ ಮರಣಗುಂಡಿಗಳ ಕಾರುಬಾರು, ಎಚ್ಚರ ಪ್ರಯಾಣಿಕರೆ ಎಚ್ಚರ…!
ಕಾಪು: ಕಾಪು ಪುರಸಭಾ ವ್ಯಾಪ್ತಿಯ ಕಳಪೆ ಒಳಚರಂಡಿ ಕಾಮಗಾರಿಯಿಂದಾಗಿ ನಿನ್ನೆ ಸುರಿದ ಭಾರಿಮಳೆಗೆ ಕಾಪು ನಗರಭಾಗದಲ್ಲಿ ಸುಮಾರು ನಾಲ್ಲು ಕಡೆ ಒಳಚರಂಡಿ ಹಾಗೂ ಮ್ಯಾನ್ ಹೋಲ್ ಕುಸಿದು ಹೋದ ಘಟನೆ ನಡೆದಿದೆ.
ಘಟನೆಯಿಂದಾಗಿ ನಗರಭಾಗದೊಳಗಿನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಪ್ರಯಾಣಿಕರಿಗೆ ಮತ್ತು ವಾಹನಚಾಲಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಸಂಬಂಧ ಪಟ್ಟವರು ಕೂಡಲೇ ಸರಿಮಾಡುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.




