ಕಾಪು : ನೂತನ ರಿಕ್ಷಾ ತಂಗುದಾಣ ಉದ್ಘಾಟನೆ ಹಾಗೂ ಸ್ವಚ್ಛ ಭಾರತ ಕಾರ್ಯಕ್ರಮ -Vishwanews24
ಕಾಪು ನೂತನ ರಿಕ್ಷಾ ತಂಗುದಾಣ ಉದ್ಘಾಟನೆ ಹಾಗೂ ಸ್ವಚ್ಛ ಭಾರತ ಕಾರ್ಯಕ್ರಮ -Vishwanews24

ಕಾಪು: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಾಣಗೊಂಡಿರುವ ಕಾಪು ಬೀಚ್ ನ ನೂತನ ರಿಕ್ಷಾ ತಂಗುದಾಣದ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿ ಮಾತನಾಡಿ ” ಹಲವಾರು ವರ್ಷದ ಬೇಡಿಕೆಯಿದ್ದ ಸಮಯದಲ್ಲಿ ಆಟೋ ಚಾಲಕಮಾಲಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈ ತಂಗುದಾಣ ನಿರ್ಮಾಣಗೊಂಡಿದೆ ಕಾಪು ಬೀಚ್ ಪ್ರವಾಸೋದ್ಯಮ ಕೇಂದ್ರವಾಗಿದ್ದು ಪ್ರವಾಸಿಗರಿಗೂ ಇದರಿಂದ ಅನುಕೂಲವಾಗಲಿದೆ ಎಂದರು.

ಸಂಸ್ಥೆಯ ಅಧ್ಯಕ್ಷರಾದ ಗಂಗಾಧರ ಸುವರ್ಣ ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ ನಾವುಡ,ಪುರಸಭಾ ಸದಸ್ಯೆ ಮಮತಾ ಸಾಲ್ಯಾನ್,ಉದ್ಯಮಿ ಮನೋಹರ ಶೆಟ್ಟಿ ಉಪಸ್ಥಿತರಿದ್ದರು.

