ಕಾಪು ಪುರಸಭಾ ಚುನಾವಣೆ : ಜೆ ಡಿ ಎಸ್ ಪಕ್ಷದ ವತಿಯಿಂದ ಬರದಿಂದ ಸಾಗುತ್ತಿದೆ ಮನೆ ಮನೆ ಪ್ರಚಾರ ..Vishwanews24

Featured, ಉಡುಪಿ

ಕಾಪು ಪುರಸಭಾ ಚುನಾವಣೆ : ಜೆ ಡಿ ಎಸ್ ಪಕ್ಷದ ವತಿಯಿಂದ ಬರದಿಂದ ಸಾಗುತ್ತಿದೆ ಮನೆ ಮನೆ ಪ್ರಚಾರ ..
ಜೆ ಡಿ ಎಸ್ ನ ಎಲ್ಲಾ ಅಭ್ಯರ್ಥಿಗಳಿಗೆ ಮತ ನೀಡಿ, ಗೆಲ್ಲಿಸಿ
ಜನಸಾಮಾನ್ಯರ ಎಲ್ಲಾ ಸಂಕಷ್ಟ ಗಳಿಗೆ ನಾವು ಸ್ಪಂದಿಸುತೇವೆ..
ಯೋಗೀಶ್ ವಿ ಶೆಟ್ಟಿ..

ಕಾಪು ಪುರಸಭಾ ಚುನಾವಣೆ 2021ರ ಜೆ ಡಿ ಎಸ್ ಪಕ್ಷದ ವತಿಯಿಂದ ಮನೆ ಮನೆ ಪ್ರಚಾರಗಳು ಬರದಿಂದ ಸಾಗುತ್ತಿದೆ. 2ನೇ ಅವದಿಗೆ ಕಾಪು ಪುರಸಭೆಯ ಚುನಾವಣೆಗೆ ಜೆ ಡಿ ಎಸ್ ಪಕ್ಷದಿಂದ 7ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

ಕಳೆದ ಬಾರಿ ಮೊದಲು ಕಾಂಗ್ರೆಸ್ ನಂತರ ಬಿಜೆಪಿ ಅಧಿಕಾರವನ್ನು ನಡೆಸಿದೆ. ಪುರಸಭೆ, ಪ್ರಾಧಿಕಾರ, ಇನ್ನಿತರ ಕಾನೂನಾತ್ಮಕ ತೊಡರುಗಳಿಂದ 25% ಜನರಿಗೆ ಲಾಭ 75% ನಷ್ಟವೇ ಆಗಿದೆ. ತೆರಿಗೆ ಏರಿಸುವುದಿಲ್ಲವೆಂದು ಹೇಳಿ ಅತೀ ಹೆಚ್ಚು ತೆರಿಗೆಯನ್ನು ಏರಿಸಿರುತ್ತಾರೆ. ತುರಾತುರಿಯಲ್ಲಿ ಪ್ರಾಧಿಕಾರ ರಚನೆ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಕಾಂಗ್ರೆಸ್, ಬಿಜೆಪಿಯ ಪುರಸಭೆಯ ಸದಸ್ಯರು ಜನರನ್ನು ಕತ್ತಲೆಯಲ್ಲಿಟ್ಟು, ಹಸಿರು ವರ್ತುಲ ಮಾಡಲು ಹೊರಟಿರುತ್ತಾರೆ. ಯಾವುದೇ ರೀತಿಯಲ್ಲಿ ಜನರಿಂದ ಚರ್ಚೆ/ಅಭಿಮತವನ್ನು ಪಡೆದುಕೊಳ್ಳಲಿಲ್ಲ. ಪುರಸಭೆಯಲ್ಲಿ ಜನರ ಸರ್ವತೋಮುಖ ಅಭಿವೃದ್ಧಿಗೆ,ಮೂಲಭೂತ ಸೌಕರ್ಯಕ್ಕೆ ಕಂಡಿತಾ ಒತ್ತು ಕೊಡುತ್ತೇವೆ, ಜನಸಾಮಾನ್ಯರ ಎಲ್ಲಾ ಸಂಕಷ್ಟ ಗಳಿಗೆ ನಾವು ಸ್ಪಂದಿಸುತೇವೆ ಇದು ನಮ್ಮ ಶಪಥ.

ಜನವಿರೋಧಿ ಕಾನೂನಿನ ಬಗ್ಗೆ ವ್ಯವಸ್ಥಿತ ರೀತಿಯಲ್ಲಿ ವಿರೋಧವನ್ನು ಮಾಡಿ ಜನರ ಪರವಾಗಿ ಸಮರ್ಪಕವಾಗಿ ನಾವು ಕಾರ್ಯನಿರ್ವಹಿಸುತ್ತೇವೆ. ಅದಕ್ಕಾಗಿ ನಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಿರಿ ಎಂಬ ಭರವಸೆ ನಮ್ಮಲ್ಲಿದೆ

ಮುಂದಿನ ದಿನಗಳಲ್ಲಿ ಪುರಸಭೆ ವ್ಯಾಪ್ತಿಯ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ನಾವು ಮಾಡುತೇವೆ,ಅದಕ್ಕಾಗಿ ನಮ್ಮ ಎಲ್ಲಾ ಅಭ್ಯರ್ಥಿಗಳಿಗೆ ಮತ ನೀಡಿ, ಗೆಲ್ಲಿಸಬೇಕಾಗಿ ವಿನಂತಿಸಿಕೊಳ್ಳುತೇವೆ.
ಯೋಗೀಶ್ ವಿ ಶೆಟ್ಟಿ
ಜಿಲ್ಲಾಧ್ಯಕ್ಷರು