ಕಾಪು ಪುರಸಭಾ ಚುನಾವಣೆ-ಪುರಸಭೆ ಕಟ್ಟಡದಲ್ಲಿ ಮತಎಣಿಕೆಗೆ ಸಕಲ ಸಿದ್ಧತೆ-100 ಪೊಲೀಸ್ ನಿಯೋಜನೆ-144 ಸೆಕ್ಷನ್ ಜಾರಿ:vishwanews24

Featured, ಉಡುಪಿ

ಕಾಪು ಪುರಸಭಾ ಚುನಾವಣೆ-ಪುರಸಭೆ ಕಟ್ಟಡದಲ್ಲಿ ಮತಎಣಿಕೆಗೆ ಸಕಲ ಸಿದ್ಧತೆ-100 ಪೊಲೀಸ್ ನಿಯೋಜನೆ-144 ಸೆಕ್ಷನ್ ಜಾರಿ

ಕಾಪು: ಪುರಸಭಾ ಚುನಾವಣೆಯ ೬೭ ಅಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರವಾಗಲಿದ್ದು ಮತೆಣಿಕೆ ಕೇಂದ್ರದಲ್ಲಿ ಸಕಲ ಸಿದ್ಧತೆಯಾಗಿದೆ. ಬೆಳಗ್ಗೆ 7 ಗಂಟೆಗೆ ಸರಿಯಾಗಿ ಭದ್ರಾತಕೊಠಡಿ ಓಪನ್ ಮಾಡಿ ನಂತರ ಪುರಸಭೆಯ ಇಂದಿರಾ ಗಾಂಧಿ ಹವಾನಿಯಂತ್ರಿತ ಕೊಠಡಿಯಲ್ಲಿ ಮತಎಣಿಕೆ ನಡೆಯಲಿದೆ.ಒಟ್ಟು ಆರು ಸುತ್ತಿನಲ್ಲಿ ಮತಎಣಿಕೆಯಾಗಲಿದ್ದು ನಾಲ್ಕು ಟೇಬಲ್‌ನಲ್ಲಿ 25 ಸಿಬ್ಬಂದಿಗಳ ಜೋಡನೆಯಲ್ಲಿ ಎಣಿಕೆ ಕಾರ್ಯ ನಡೆಯುತ್ತದೆ.

ಪೊಲೀಸ್ ಬಂದೋಬಸ್ತು
ಎಣಿಕಾ ಕೇಂದ್ರದಿಂದ ಸುಮಾರು 100 ಮೀಟರ್ ಹೊರಗೆ ಸಾರ್ವಜನಿಕರಿಗೆ ಅಭಿಮಾನಿಗಳಿಗೆ ಇರಲು ವ್ಯವಸ್ಥೆ ಕಲ್ಪಿಸಲಾಗಿದೆ.ಭದ್ರತೆಯ ದೃಷ್ಟಿಯಿಂದಸುಮಾರು 100 ಮಂದಿ ಪಲೀಸ್ ನಿಯೋಜನೆಮಾಡಿದ್ದು ಒಂದು ಸರ್ಕಲ್ ಇನ್ಸ್ಪೆಕ್ಟರ್ ,6ಸಬ್ ಇನ್ಸ್ಪೆಕ್ಟರ್ ,9 ಎ.ಎಸ್.ಐ. , 80  ಮಂದಿ ಪೊಲೀಸ್ ಸಿಬಂಧಿಗಳು ಸೇರಿದಂತೆ ಒಂದು ಡಿ.ರ್ ಬಂದೋಬಸ್ತಿನಲ್ಲಿರಲಿದೆ.

ಪಾರ್ಕಿಗ್ ವ್ಯವಸ್ಥೆ
ಮತಎಣಿಕಾ ಕೇಂದ್ರಕ್ಕೆ ಆಗಮಿಸುವ ಪ್ರಯಾಣಿಕರು ವಾಹನವನ್ನು ಪೊಲಿಪು ರಸ್ತೆಯ ಕಾಂಚನ್ ಮೂಲಸ್ಥಾನ.ಹೊಸಮಾರಿಗುಡಿ ದೇವಸ್ಥಾನ,ಮತ್ತು ದಂಡತೀರ್ಥ ಶಾಲೆಯಲ್ಲಿ ಪಾರ್ಕಿಗ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಯಾವುದೇ ಕಾರಣಕ್ಕೂ ಪುರಸಭೆಯ ಆವರಣಕ್ಕೆ ಪಾಸ್ ಇದ್ದವರಿಗೆ ಪ್ರವೇಶ ಬಿಟ್ಟು ಉಳಿದ ಯಾರಿಗೂ ಅವಕಾಶವಿರುವುದಿಲ್ಲ ಎಂದು ಪೊಲೀಸ್ ಮಾಹಿತಿಗಳು ತಿಳಿಸಿದೆ.
ಸೆಕ್ಷನ್144 ಜಾರಿ
ಮತಎಣಿಕೆಯ ನಾಳೆಯ ದಿನ ಪುರಸಭಾ ವ್ಯಾಪ್ತಿಯಲ್ಲಿ ಸೆಕ್ಷನ್144 ಜಾರಿಯಾಗಲಿದ್ದು ಯಾವುದೇ ರೀತಿಯ ವಿಜಯೋತ್ಸವ ಮೆರವಣಿಗೆಗಳಿಗೆ ಅವಕಾಶವಿರುವುದಿಲ್ಲ.

Leave a Reply