ಕಾಪು ಪುರಸಭಾ ಚುನಾವಣೆ-ಬಿರುಸಿನ ಮತದಾನ-ಟೈಟ್ಫೈಟ್: vishwanews24
ಕಾಪು ಪುರಸಭಾ ಚುನಾವಣೆ-ಬಿರುಸಿನ ಮತದಾನ-ಟೈಟ್ಫೈಟ್: vishwanews24
ಕಾಪು: ಪುರಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದು 23 ವಾರ್ಡಿಗೆ ಮತದಾನ ನಡೆಯುತ್ತಿದ್ದು ಎಲ್ಲಾ ವಾರ್ಡಿನಲ್ಲಿ ಶೇಕಾಡ 50% ಮತದಾನ ಆಗಿರುವ ಬಗ್ಗೆ ವರದಿಯಾಗಿದೆ.ಈ ಮಧ್ಯೆ ವಿವಿಧ ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಮತದಾನಕ್ಕಾಗಿ ಮತದಾರರನ್ನು ಕರೆದುಕೊಂಡು ಬರುವ ದೃಶ್ಯಗಳು ಕೆಲವೊಂದು ವಾರ್ಡಿನಲ್ಲಿ ಕಂಡುಬಂದಿದೆ.
ವಾರ್ಡಿನ ಮತಗಟ್ಟೆಯ ಬೂತುಗಳಿಗೆ ಆಯಾ ಪಕ್ಷದ ಮುಖಂಡರಾದ ವಿನಯ್ ಕುಮಾರ್ ಸೊರಕೆ, ಶಾಸಕ ಲಾಲಾಜಿ ಆರ್ ಮೆಂಡನ್, ಬೆಳಪು ದೇವಿಪ್ರಸಾದ್ ಶೆಟ್ಟಿ,ರಾಜಶೇಖರ್ ಎಸ್ ಕೋಟ್ಯಾನ್,ಬಾಲಾಜಿ ಯೋಗಿಶ್ ಶೆಟ್ಟಿ,ನವೀನ್ಚಂದ್ರ ಶೆಟ್ಟಿ,ಮೊದಲಾದವರು ಭೇಟಿ ನೀಡಿದರು.
23 ವಾರ್ಡಿನ ಪೈಕಿ 20 ವಾರ್ಡಿನಲ್ಲಿ ಬಿಜೆಪಿ ,ಕಾಂಗ್ರೇಸ್ ಪಾರ್ಟಿ ಮತ್ತು ಉಳಿದ ಮೂರು ಕಡೆ ಎಸ್ಡಿಪಿಐ ಹಾಗೂ ಬಿಜೆಪಿ ,ಕಾಂಗ್ರೇಸ್ ನಡುವೇ ತೀವೃ ಟೈಟ್ಫೈಟ್ ನಡೆಯುತ್ತಿದೆ.
