ಕಾಪು ಪುರಸಭೆ ಚುನಾವಣೆ ಇನ್ನೂ ಬಿಡುಗಡೆಯಾಗದ ಕಾಂಗ್ರೇಸ್ ಪಟ್ಟಿ: vishwanews24

Featured, ಉಡುಪಿ

ಕಾಪು ಪುರಸಭೆ ಚುನಾವಣೆ ಇನ್ನೂ ಬಿಡುಗಡೆಯಾಗದ ಕಾಂಗ್ರೇಸ್ ಪಟ್ಟಿ

ಕಾಪು: ಪುರಸಭಾ ಚುನಾವಣೆ ಉಮೇದುದಾರಿಕೆ ಸಲ್ಲಿಸಲು ನಾಳೆಯ ಕೊನೆಯ ದಿನವಾಗಿದ್ದರೂ ಇದುವರೆಗೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಇನ್ನೂ ಬಿಡುಗಡೆಯಾಗದೆ ಇರುವುದು ಹಲವಾರು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ.


ಕಳೆದ ಅವಧಿಯ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ೧೨ ಸೀಟ್ ಪಡೆಯುವ ಮುಖಾಂತರ ಪುರಸಭೆಯಲ್ಲಿ ಆಡಳಿತ ನಡೆಸಿತ್ತು ಆದರೇ ಈ ಬಾರಿ ಮಾತ್ರ ಕೆಲವೊಂದು ವಾರ್ಡಿನಲ್ಲಿ ಅಭ್ಯರ್ಥಿಗಳ ಕೊರತೆಯಾಗಿದೆ ಹಾಗಾಗಿ ಬೇರೆ ಬೇರೆ ವಾರ್ಡಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಯತ್ನ ನಡೆಯುತ್ತಿದೆಂಬ ಮಾಹಿತಿ ಲಬ್ಯವಾಗಿದೆ.

ಸೊರಕೆಗೆ ಇದು ಪ್ರತಿಷ್ಠೆಯ ಚುನಾವಣೆ
ಕಾಪು ಕ್ಷೇತ್ರದಿಂದ ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೇಸ್ ಪಕ್ಷದಿಂದ ವಿನಯ್ ಕುಮಾರ್ ಸೊರಕೆಯ ಹೆಸರು ಜೋರಾಗಿ ಕೇಳಿ ಬರುತ್ತಿದೆ ಮತ್ತು ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ಕೂಡ ಹೆಚ್ಚು ಆದ್ದರಿಂದ ಈ ಬಾರಿಯ ಪುರಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಅತೀ ಸೀಟ್ ಗೆಲ್ಲುವ ಮುಖಾಂತರ ನಾಯಕನ ಶಕ್ತಿ ಪ್ರದರ್ಶನ ತೋರಿಸಬೇಕಾಗಿದೆ.

 

ಕಾಂಗ್ರೆಸ್ಗೆ ಕಬ್ಬಿಣದ ಕಡಲೆಯಾದ ಎಸ್.ಡಿ.ಪಿ.ಐ
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಸ್.ಡಿ.ಪಿ.ಐ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಕೆಲವೊಂದು ವಾರ್ಡಿನಲ್ಲಿ ಕಾಂಗ್ರೇಸ್ ಬೆಂಬಲಿತ ಅಲ್ಪಸಂಖ್ಯಾತ ನಾಯಕರು ಬಹಿರಂಗವಾಗಿ ಎಸ್.ಡಿ.ಪಿ.ಐ ಜತೆ ಸೇರಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಕೂಡ ಕಾಂಗ್ರೆಸ್ಗೆ ಸ್ವಲ್ಪದರ ಮಟ್ಟಿಗೆ ಪೆಟ್ಟು ಬಿದ್ದಿದೆ, ಹೀಗಾಗಿ ಅಲ್ಪಸಂಖ್ಯಾತರನ್ನು ನಂಬಿಕೊAಡಿದ್ದ ಕಾಂಗ್ರೆಸ್ಸ್ ಗೆ ಮಾತ್ರ ಎಸ್.ಡಿ.ಪಿ.ಐ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.