ಕಾಪು ಪುರಸಭೆಯ ಗಟ್ಟಿಧ್ವನಿಯ ನಾಯಕ ಬಿಜೆಪಿ ಅಭ್ಯರ್ಥಿ ಕಿರಣ್ ಆಳ್ವಾ ಪರ ಇನ್ನೂರಕ್ಕೂ ಅಧಿಕ ಕಾರ್ಯಕರ್ತರಿಂದ ಮಾಸ್ ಫೀಲ್ಡ್: vishwanews24

Featured, ಉಡುಪಿ

ಕಾಪು ಪುರಸಭೆಯ ಗಟ್ಟಿಧ್ವನಿಯ ನಾಯಕ ಬಿಜೆಪಿ ಅಭ್ಯರ್ಥಿ ಕಿರಣ್ ಆಳ್ವಾ ಪರ ಇನ್ನೂರಕ್ಕೂ ಅಧಿಕ ಕಾರ್ಯಕರ್ತರಿಂದ ಮಾಸ್ ಫೀಲ್ಡ್: vishwanews24

ಕಾಪು: ಪುರಸಭಾ ಚುನಾವಣೆಯ ಕಾವು ದಿನಕಳೆದಂತೆ ಜಾಸ್ತಿಯಾಗತೊಡಕಿದೆ ಈ ಪೈಕಿ ಕರಾವಳಿ ವಾರ್ಡಿನಲ್ಲಿ ಆಯ್ಕೆಯಾದ ಬಿಜೆಪಿ ಪುರಸಭಾ ಸದಸ್ಯ ಕಿರಣ್ ಆಳ್ವಾರಿಗೆ ಬಿಜೆಪಿ ಮತ್ತೊಮ್ಮೆ ಟಿಕೆಟ್ ನೀಡಿ ಚುನಾವಣಾ ಇಳಿಸಿದೆ ಆದ್ದರಿಂದ ಇಂದು ಬಿಜೆಪಿ ನಾಯಕರ ದಂಡು ಕರಾವಳಿ ವಾರ್ಡಿಗೆ ಇಳಿದುಬಿಟ್ಟಿದೆ.


ಸುಮಾರು 200 ಕ್ಕೂ ಅಧಿಕ ಕಾರ್ಯಕರ್ತರು ಸೇರಿದಂತೆ ನಾಯಕರಾದ ಗುರ್ಮೆ ಸುರೇಶ್ ಶೆಟ್ಟಿ, ಚುನಾವಣಾ ಉಸ್ತುವಾರಿ ಮಟ್ಟಾರ್ ರತ್ನಾಕರ ಹೆಗ್ಡೆ-ಮೀನುಗಾರ ಮುಖಂಡ ಯಶ್ಪಾಲ್ ಸುವರ್ಣ – ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಮೊದಲಾದವರು ಫೀಲ್ಡ್‍ಗೆ ಇಳಿದು ಕಿರಣ್ ಆಳ್ವಾ ಪರ ಮತಯಾಚನೆ ನಡೆಸಿದರು.


ಜನರಿಂದ ಆಯ್ಕೆಗೊಂಡು ಕಳೆದ ಬಾರಿ ಪುರಸಭೆಗೆ ಆಯ್ಕೆಯಾದ ನಾಯಕನಿಗೆ ಮತ್ತೆ ಅದೇ ವಾರ್ಡಿನಲ್ಲಿ ಬಿಜೆಪಿ ಟಿಕೆಟ್ ನೀಡಿ ಅದೃಷ್ಟ ಪರಿಕ್ಷೇಗೆ ಇಳಿಸಿದೆ.
ಕಳೆದ ಅವಧಿಯಲ್ಲಿ ಕರಾವಳಿ ವಾರ್ಡಿಗೆ ಸಿ.ಆರ್.ಝೆಡ್ ಸಮಸ್ಯೆಯ ಕಾನೂನಿನ ತೊಡಕಿನ ನಡುವೆ ಸರಿಪಡಿಸಿಕೊಂಡು 23ಲಕ್ಷಕ್ಕೂ ಅಧಿಕ ಅನುದಾನ ತಂದು ಮಾಡಿದ ಕಾಮಗಾರಿ ಪುರಸಭೆಯ ದಾಖಲೆಗಳಲ್ಲಿ ಭದ್ರವಾಗಿದೆ.


ಈ ಪೈಕಿ ಯಾರ್ಡ್ ಫ್ರೆಂಡ್ಸ್ ರಂಗಮಂದಿರಕ್ಕೆ ಶೌಚಾಲಯ ಮತ್ತು ಮುಂದುವರಿದ ಕಾಮಗಾರಿ ಮತ್ತು ರಂಗವೇದಿಕೆ ನಿರ್ಮಾಣಕ್ಕೆ ಒಟ್ಟು 9 ಲಕ್ಷ ರೂಪಾಯಿ ಹಾಗೂ ಎಸ್ ಸಿ ಕಾಲನಿಯ ಬಾವಿ ದುರಸ್ತಿ,ಸೋಲಾರ್ ದೀಪ,ಚರಂಡಿ ನಿರ್ಮಾಣ 7 ಲಕ್ಷ ಹಾಗೂ ಇತರ ಕಾಮಗಾರಿಗಳ ಒಟ್ಟು 23 ಲಕ್ಷದ ಅನುದಾನ ತರುವಲ್ಲಿ ಯಶಸ್ವಿಯಾದ ಸದಸ್ಯ.


ಧಾರ್ಮಿಕ- ಶೈಕ್ಷಣಿಕ-ಸಾಂಸ್ಕøತಿಕ ಕ್ಷೇತ್ರದಲ್ಲಿ ತನ್ನದೆ ಆದ ಛಾಪುವಿನಲ್ಲಿ ಮಾಡಿದ ಸ್ವಾರ್ಥ ರಹಿತ ಕೆಲಸ ಕಾರ್ಯಗಳು ಜನಮೆಚ್ಚುವಂತೆ ಮಾಡಿತ್ತು
ಪುರಸಭೆಗೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರಲ್ಲಿ ಕಿರಣ್ ಆಳ್ವಾ ಕೂಡ ಒಬ್ಬರು
2015 ಸುಮಾರಿಗೆ ಗ್ರಾಮರಕ್ಷಣಾ ಸಮಿತಿಯಲ್ಲಿ ಸಕ್ರಿಯರಾಗಿದ್ದುಕೊಂಡು ಉಡುಪಿಯ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಪುರಭೆಯ ಅನಾಹುತದ ಬಗ್ಗೆ ಗ್ರಾಮಸ್ಥರಿಗೆ ಬಡಿದೆಬ್ಬಿಸಿದ ಕೀರ್ತಿಗೆ ಆಳ್ವಾ ಒಳಗಾಗಿದ್ದರು.

ಪುರಸಭೆಯಲ್ಲಿ ಗಟ್ಟಿ ಧ್ವನಿಯ ಸದಸ್ಯ

ಕಳೆದ ಬಾರಿ ಆಯ್ಕೆಯಾದ ಸಂಧರ್ಭದಲ್ಲಿ ವಿರೋಧಪಕ್ಷದಲ್ಲಿದ್ದುಕೊಂಡು ಪುರಸಭೆಯ ಸಮಸ್ಯೆಗಳ ಬಗ್ಗೆ ಗಟ್ಟಿಧ್ವನಿಯಲ್ಲಿ ಧ್ವನಿಏರಿಸಿ ಮಾತಾಡಿ ಜನಸಾಮಾನ್ಯರಿಗೆ ಹೊರೆಯಾಗುವ ಕಾನೂನಿನ ಬಗ್ಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದ ಸದಸ್ಯರಾಗಿದ್ದರೂ ಮಾತ್ರವಲ್ಲದೆ ಅಧಿಕಾರಿಗಳಲ್ಲಿ ಕಾಮಗಾರಿಗಳಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳದ ಪುರಸಭಾ ಸದಸ್ಯ ಎಂಬ ಪಟ್ಟ ಇತ್ತು.


ಅತೀ ಹೆಚ್ಚು ವ್ಯಾಕ್ಸಿನೇಷನ್ ಮಾಡಿಸಿದ್ದ ಪುರಸಭಾ ಸದಸ್ಯ

ಕೋವಿಡ್ ವ್ಯಾಕ್ಸಿನೇಷನ್ ವಿಚಾರವಾಗಿ ಕರಾವಳಿ ವಾರ್ಡಿಗೆ ಅತೀ ಹೆಚ್ಚು ಮಾಡಿಸುವಲ್ಲಿ ಯಶಸ್ವಿಯಾದ ಸದಸ್ಯ ಅನ್ನುವುದರಲ್ಲಿ ಎರಡು ಮಾತಿಲ್ಲ ಯಾವುದೇ ಸಮಯದಲ್ಲೂ ಕಾಪು-ಉಡುಪಿಗೆ ವ್ಯಾಕ್ಸಿನ್ ಬಂದ್ರೆ ಮೊದಲಿಗೆ ಒತ್ತಡಹೇರಿ ಕರಾವಳಿ ವಾರ್ಡಿಗೆ ಅತೀ ಹೆಚ್ಚು ವ್ಯಾಕ್ಸಿನ್ ತರುವಲ್ಲಿ ನಂಬರ್ ವನ್ ಅನಿಸಿಕೊಂಡಿರುವ ಪುರಸಭಾ ಸದಸ್ಯ ಮತ್ತು ಅಂಕಿ ಅಂಶದ ಪ್ರಕಾರ 23 ವಾರ್ಡಿನ ಪೈಕಿ 99.99 ಶೇಕಾಡ ವ್ಯಾಕ್ಸಿನೇಷನ್ ಆಗಿರುವ ಕರಾವಳಿ ವಾರ್ಡ್ ಎಂಬ ಮಾಹಿತಿ ಲಭ್ಯವಾಗಿದೆ.

ವ್ಯಾಕ್ಸಿನ್ ವಿಚಾರವಾಗಿ ಗ್ರಾಮಸ್ಥರಿಗಾಗಿ ಶಾಸಕರೊಂದಿಗೆ ಮುನಿಸು

ಕರಾವಳಿ ವಾರ್ಡಿಗೆ ಅತೀ ಹೆಚ್ಚು ವ್ಯಾಕ್ಸಿನ್‍ಗಾಗಿ ಒತ್ತಡ ಹೇರಿದÀ ಪರಿಣಾಮವಾಗಿ ಕೆಲವು ಸಮಯಗಳ ಕಾಲ ಕಾಪು ಶಾಸಕರೊಂದಿಗೆ ಮುನಿಸು ಮಾಡಿಕೊಂಡಿದ್ದರು ಎಂಬ ವಿಚಾರ ಕೂಡ ಭಾರಿ ಸುದ್ದಿ ಮಾಡಿತ್ತು.

ಕರಾವಳಿ ವಾರ್ಡಿನಲ್ಲಿ ದಾಂಡಿಗ-ಎಸೆತೆಗಾರ-ನಿರ್ಣಾಯಕ ಮತದಾರ
23 ವಾರ್ಡಿನ ಪೈಕಿಯಲ್ಲಿ ಕರಾವಳಿ ವಾರ್ಡ್ ಅತ್ಯಂತ ಮಹತ್ವದ್ದಾಗಿದೆ ಕಾರಣ ಇಷ್ಟೆ ಕಳೆದ ಹಲವಾರು ದಿನಗಳಿಂದ ತುಂಬಾ ಸುದ್ದಿಯಲ್ಲಿದ ವಾರ್ಡ್ ಇದಾಗಿದೆ ಮಾತ್ರವಲ್ಲದೆ ಈ ವಾರ್ಡಿನಲ್ಲಿ ಕ್ಷೇತ್ರ ರಕ್ಷಕನನ್ನು ಆಯ್ಕೆ ಮಾಡಿ ಪುರಸಭೆ ಕಳುಹಿಸುವ ಪ್ರಜ್ಞಾವಂತ ಮತದಾರರು ಇಲ್ಲಿ ನಿರ್ಣಾಯಕರು ಮತ್ತು ದಾಂಡಿಗರು ಯಾರನ್ನು ಬೇಕಾದರೂ ಬೇಡ ಎಸೆದು ಬಿಸಾಡುವ ಎಸೆತಗಾರರು ಆಗಿದ್ದಾರೆ.
ಕಿರಣ್ ಆಳ್ವಾ ಪರ ಮತದಾರ ಯಾವ ನಿರ್ಧಾರ ಮಾಡುತ್ತಾನೆಂದು ಕಾದು ನೋಡಬೇಕಾಗಿದೆ.
ಪೊಲಿಟಿಕಲ್ ಬ್ಯೂರೋ ವಿಶ್ವನ್ಯೂಸ್24