ಕಾಪು ಪೋಲಿಸ್ ಠಾಣೆ ಶಾಂತಿ ಸಭೆ

Featured, ಉಡುಪಿ

ಕಾಪು ಪೋಲಿಸ್ ಠಾಣೆ ಶಾಂತಿ ಸಭೆ

ಕಾಪು : ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್ ಆಚರಣೆ ವೇಳೆ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಜಾತಿಯ ಜನರು ಸಹಕಾರ ನೀಡುವಂತೆ ಪೋಲಿಸ್ ಉಪನಿರೀಕ್ಷಕರಾದ ನಿತ್ಯಾನಂದ ಗೌಡ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ನಡೆದ ಸರ್ವಧರ್ಮ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಹಲವು ಸೂಕ್ಷ್ಮ ಸನ್ನಿವೇಶಗಳು ಇರುವುದರಿಂದ ನಾಗರಿಕರ ಹಿತ ಕಾಪಾಡುವುದು ಮತ್ತು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ರಕ್ಷಣೆ ಹೊಣೆ ನಮ್ಮ ಮೇಲಿದೆ. ಈ ಹಿಂದಿನಿಂದ ನಡೆದು ಬಂದಂತೆ ಸೌಹಾರ್ದಯುತವಾಗಿ ರಂಜಾನ್ ಆಚರಿಸುವಂತೆ ಹೇಳಿದರು.

ಸಹಾಯಕ ಉಪನೀರಿಕ್ಷಕ ಕರುಣಾಕರ್, ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.ಠಾಣ ಸಿಬ್ಬಂದಿ ಗಣೇಶ್ ಕುಮಾರ್ ಸ್ವಾಗತಿಸಿ ವಂದಿಸಿದರು.