ಕಾಪು : ಪ್ರತೀ ವರ್ಷ ಜೀವಂತ ನಾಗರ ಹಾವಿಗೆ ತನು ಎರೆದು ನಾಗರ ಪಂಚಮಿ ಆಚರಿಸುವ ಮಜೂರು ಗೋವರ್ಧನ ಭಟ್ – Vishwanews24
ಕಾಪು : ಪ್ರತೀ ವರ್ಷ ಜೀವಂತ ನಾಗರ ಹಾವಿಗೆ ತನು ಎರೆದು ನಾಗರ ಪಂಚಮಿ ಆಚರಿಸುವ ಮಜೂರು ಗೋವರ್ಧನ ಭಟ್
ಕಾಪು : ಕಾಪು ತಾಲೂಕಿನ ಮಜೂರಿನಲ್ಲಿ ಜೀವಂತ ನಾಗರ ಹಾವಿಗೆ ತನು ಎರೆದು ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಯಿತು.
ಮಜೂರು ಗೋವರ್ಧನ ಭಟ್ ಅವರು ಪ್ರತೀ ವರ್ಷ ತಮ್ಮ ಮನೆಯಲ್ಲಿ ಶುಶ್ರೂಷೆಯಲ್ಲಿರುವ ನಾಗರ ಹಾವುಗಳಿಗೆ ತನು ಎರೆದು ನಾಗರ ಪಂಚಮಿ ನಡೆಸುತ್ತಾರೆ.
ಗಾಯಾಳು ಮತ್ತು ಅಸ್ವಸ್ಥ ನಾಗರಹಾವುಗಳನ್ನು ಮನೆಗೆ ತಂದು ಶುಶ್ರೂಷೆ ನೀಡುವ ಅವರು ಗುಣಮುಖವಾದ ಹಾವುಗಳನ್ನು ಮರಳಿ ಕಾಡು, ಬನಕ್ಕೆ ಬಿಡುತ್ತಾರೆ.

ಗೋವರ್ಧನ ಭಟ್ ಅವರು ನಡೆಸುವ ಈ ಪುಣ್ಯ ಕಾರ್ಯದಲ್ಲಿ ಮನೆಮಂದಿಯೂ ಕೈ ಜೋಡಿಸುವುದು ವಿಶೇಷವಾಗಿದೆ.
ಬೈಂದೂರು ಭಾರಿ ಮಳೆ: ನೀರಿನ ರಭಸಕ್ಕೆ ಕೊಚ್ಚಿ ಹೋದ ದೋಣಿಗಳು – VIshwanews24
