ಕಾಪು ಬಿಜೆಪಿ ಕಚೇರಿಯಲ್ಲಿ ವಾಜಪೇಯಿ ನಿಧನಕ್ಕೆ  ಸಂತಾಪ ಸಭೆ

Featured, ಉಡುಪಿ

ಕಾಪು ಬಿಜೆಪಿ ಕಚೇರಿಯಲ್ಲಿ ವಾಜಪೇಯಿ ನಿಧನಕ್ಕೆ  ಸಂತಾಪ ಸಭೆ

ಕಾಪು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಕಾಪು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಸಂತಾಪ ಸೂಚನಾ ಸಭೆ ನಡೆಯಿತು.

ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಆಟಲ್‍ಜಿ ಅಜಾತಶತ್ರುವಾಗಿದ್ದು, ಎಲ್ಲಾ ಪಕ್ಷದವರೊಂದಿಗೂ ನಿಕಟ ಬಾಂಧವ್ಯ ಹೊಂದಿದ್ದರು. ಬಿಜೆಪಿಯೇತರ ಸರ್ಕಾರ ಕೇಂದ್ರದಲ್ಲಿದ್ದಾಗ ಪಕ್ಷ ಬೇಧ ಮರೆತು ಅಭಿವೃದ್ಧಿಗೆ ಶ್ರಮಿಸಿದ್ದರು. ಓರ್ವ ದೇಶ ಕಂಡ ಧೀಮಂತ ನಾಯಕರಾಗಿದ ಅಟ್ಟಲ್‍ಜಿ ಅವರು, ದೇಶದ ಒಳಿತಿಗಾಗಿ ಹಗಲಿರುಳು ದುಡಿದಿದ್ದರು. ಕಾಪುವಿಗೂ ಅವರಿಗೂ ಅವಿನಾಭಾವ ಸಂಬಂಧವಿತ್ತು ಎಂದ ಅವರು ಇಂತಹ ನಾಯಕನನ್ನು ಕಳೆದು ನಮ್ಮ ಶಕ್ತಿಯನ್ನು ಕೊಂಡಂತೆ ಎಂದು ದುಖಃ ವ್ಯಕ್ತಪಡಿಸಿದರು.
ಕಾಪು ಕ್ಷೇತ್ರ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪಂಚಾಯ್ತಿ ಸದಸ್ಯೆ ಗೀತಾಂಜಲಿ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ, ಶಂಕರ ಪೂಜಾರಿ ಕಟಪಾಡಿ ಉಪಸ್ಥಿತರಿದ್ದರು.