ಕಾಪು ಬಿಜೆಪಿ ಕಾರ್ಯಕರ್ತರ ಗೆಲುವಿನ ಓಟ ಮುಂದಿನ ಪುರಸಭೆ,ತಾ.ಪ,ಜಿ.ಪ ಚುನಾವಣೆಗೆ ಮುಂದುವರಿಯಬೇಕು: ಸಚಿವ ಸುನಿಲ್ ಕುಮಾರ್:-Vishwanews24
ಕಾಪು ಬಿಜೆಪಿ ಕಾರ್ಯಕರ್ತರ ಗೆಲುವಿನ ಓಟ ಮುಂದಿನ ಪುರಸಭೆ,ತಾ.ಪ,ಜಿ.ಪ ಚುನಾವಣೆಗೆ ಮುಂದುವರಿಯಬೇಕು: ಸಚಿವ ಸುನಿಲ್ ಕುಮಾರ್
ಕಾಪು: ಕರ್ನಾಟಕ ಸರ್ಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ,ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ಇವರಿಗೆ ಕಾಪು ಬಿಜೆಪಿ ವತಿಯಿಂದ ಪಕ್ಷದ ಕಚೇರಿಯಲ್ಲಿ ಹಾರ ತುರಾಯಿಗಳೊಂದಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು” ಉಡುಪಿ ಜಿಲ್ಲೆಗೆ ಈ ಬಾರಿ ಸುಗ್ಗಿಯ ಸಂಭ್ರಮ ಎರಡು ಮಂದಿ ರಾಜ್ಯ ಹಾಗೂ ಒಂದು ಕೇಂದ್ರ ಸಚಿವರಾಗಿ ಆಯ್ಕೆಯಾಗಿರುವ ಸುಸಂಧರ್ಭ ಹಾಗಾಗಿ ನಮ್ಮ ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಎಲ್ಲ ಜನಸೇವ ಕಾರ್ಯಕ್ರಮಗಳನ್ನು ಶೀಘ್ರವಾಗಿ ಮಾಡಲಿದ್ದೇವೆ ಮತ್ತು ಕಾಪು ಕ್ಷೇತ್ರದ ಕಾರ್ಯಕರ್ತರ ಶ್ರಮದ ಗೆಲುವಿನ ನಾಗಾಲೋಟ ಮುಂದಿನ ಪುರಸಭೆ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಮುನ್ನುಡಿ ಬರೆಯಬೇಕಾಗಿದೆ ಎಂದರು.
ಮುಂದಿನ ವಾರದಲ್ಲಿ ಉಡುಪಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೊಂದಿಗೆ ಸಂವಾದ ಸಭೆ ಕರೆದು ಇಲ್ಲಿನ ಯುಪಿಸಿಎಲ್, ಐಎಸ್ಪಿಆರ್ ಎಲ್, ಡೀಮ್ಡ್ ಫಾರೆಸ್ಟ್ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ ಎಂದರು.
ಈ ಸಂದರ್ಭದಲ್ಲಿ USPRL ಸಂತ್ರಸ್ತರು ಸಚಿವರಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್,ರಾಜ್ಯ ಬಿಜೆಪಿ ಮಹಿಳಾ ಮೋರ್ಚ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ ಗೀತಾಂಜಲಿ ಸುವರ್ಣ ಕ್ಷೇತ್ರ ಅಧ್ಯಕ್ಷ ಶ್ರೀಕಾಂತ್ ನಾಯಕ್, ಕಾರ್ಯದರ್ಶಿ ಗೋಪಾಲಕೃಷ್ಣ ರಾವ್,
ಮಾಜಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಮೊದಲಾದವರು ಉಪಸ್ಥಿತರಿದ್ದರು.


