ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಅಶೋಕ್ ರಾವ್ ಹಾಗೂ ಪಂಚಾಯತ್ ಸದಸ್ಯರಾದ ಈಶ್ವರ್ ಕಟಪಾಡಿ ಬಿಜೆಪಿ ಸೇರ್ಪಡೆ – Vishwanews24

Featured, ಉಡುಪಿ

ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಅಶೋಕ್ ರಾವ್ ಹಾಗೂ ಪಂಚಾಯತ್ ಸದಸ್ಯರಾದ ಈಶ್ವರ್ ಕಟಪಾಡಿ ಬಿಜೆಪಿ ಸೇರ್ಪಡೆ

ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರು, ಕಟಪಾಡಿ ಸಿಎ ಬ್ಯಾಂಕ್ ನಿರ್ದೇಶಕರು, ಕಟಪಾಡಿ ಹಾಲು ಉತ್ಪಾದಕರ ಸಹಕಾರ ಸಂಘ (ನಿ) ಇದರ ಅಧ್ಯಕ್ಷರೂ, ಕಟಪಾಡಿ ಗ್ರಾಮ‌ ಪಂಚಾಯತ್ ಮಾಜಿ ಅಧ್ಯಕ್ಷರೂ ಹಾಲಿ ಸದಸ್ಯರೂ ಆದ ಅಶೋಕ್ ರಾವ್ ಹಾಗೂ ಕಟಪಾಡಿ ಗ್ರಾಮ‌ಪಂಚಾಯತ್ ಸದಸ್ಯರಾದ ಈಶ್ವರ ಕಟಪಾಡಿ ಇಂದು ಕಾಪು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಶಾಲು ಹೊದಿಸಿ ಪಕ್ಷದ ಧ್ವಜ ಕೊಟ್ಟು ಪಕ್ಷಕ್ಕೆ ಬರಮಾಡಿಕೊಂಡು ಶುಭ ಹಾರೈಸಿದರು. ಸೇರ್ಪಡೆಗೊಂಡ ಬಳಿಕ ಮಾತನಾಡಿದ ಅಶೋಕ್ ರಾವ್ ಕಟಪಾಡಿಯಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿಗೆ ಶಕ್ತಿತುಂಬುವ ಕೆಲಸ ಮಾಡಿ ಪಕ್ಷದ ಗೌರವ ಹೆಚ್ಚಿಸುವ ಕೆಲಸ ಮಾಡುವೆ ಎಂದರು.

ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಕಾರ್ಯಕ್ರಮ ನಿರೂಪಿಸಿದರು. ಶಕ್ತಿಕೇಂದ್ರ ಪ್ರಮುಖ್ ನಿತಿನ್ ಸೇರಿಗಾರ, ಕಟಪಾಡಿಯ ಪ್ರಮುಖರಾದ ಗಂಗಾಧರ್ ಸುವರ್ಣ ಮುರಳೀಧರ ಪೈ, ಶಿಲ್ಪಾ ಜಿ ಸುವರ್ಣ, ಸುಭಾಸ್ ಬಲ್ಲಾಳ್, ಗುರುಕ್ರಪಾ ರಾವ್, ಕವಿತಾ ಸುವರ್ಣ, ಶ್ರೀನಿವಾಸ ಕಿಣಿ, ಪವಿತ್ರ ಶೆಟ್ಟಿ, ರಘುಪತಿ‌ ಆಚಾರ್ಯ, ಬೂತ್ ಅಧ್ಯಕ್ಷರಾದ ಕರುಣಾಕರ ಪೂಜಾರಿ, ನಿತೇಶ್ ದೇವಾಡಿಗ, ಕಟಪಾಡಿ‌ ಪಂಚಾಯತ್ ನ ಎಲ್ಲ ಸದಸ್ಯರುಗಳು, ಮುಖಂಡರುಗಳಾದ ಅರುಣ್ ಶೆಟ್ಟಿ ‌ಪಾದೂರು, ಅನಿಲ್ ಕುಮಾರ್, ನವೀನ್ ಎಸ್ ಕೆ, ರತ್ನಾಕರ ಶೆಟ್ಟಿ, ಶೈಲೇಶ್ ಅಮೀನ್, ಸಂದೀಪ್ ಶೆಟ್ಟಿ, ಸಂದೀಪ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Leave a Reply