ಕಾಪು : ಭಾರತ್ ಜೋಡೋ ಮತ್ತು ಗ್ಯಾರಂಟಿ ಯೋಜನೆಗಳ ಮಾಹಿತಿ ಕಾರ್ಯಾಗಾರ – vishwanews24

Featured, ಉಡುಪಿ

ಕಾಪು : ಭಾರತ್ ಜೋಡೋ ಮತ್ತು ಗ್ಯಾರಂಟಿ ಯೋಜನೆಗಳ ಮಾಹಿತಿ ಕಾರ್ಯಾಗಾರ

ಕರ್ನಾಟಕ ಸರ್ಕಾರದ ಯೋಜನೆಗಳಾದ ಭಾರತ್ ಜೋಡೋ ಮತ್ತು ಗ್ಯಾರಂಟಿ ಯೋಜನೆಗಳ ಮಾಹಿತಿ ಕಾರ್ಯಾಗಾರವು ಕುತ್ಯಾರು ಗ್ರಾಮೀಣ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ, ಕುತ್ಯಾರು ಗ್ರಾಮದ ರೋಹನ್ ಕುಮಾರ್ ಅವರ ನಿವಾಸದಲ್ಲಿ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿನಯ್ ಕುಮಾರ್ ಸೊರಕೆ ಅವರು ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಪು ಕ್ಷೇತ್ರವು ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಲು ಸಂತೋಷವಾಗುತ್ತದೆ ಎಂದರು. ಇದೆಲ್ಲವೂ ಕಾಂಗ್ರೆಸ್ ಪಕ್ಷದ ಸದಸ್ಯರ ಮುತುವರ್ಜಿಯಿಂದ ಸಾಧ್ಯವಾಗಿದೆ ಎಂದು ಹೇಳಿದರು.

ದೇಶ ವಿರೋಧಿ ಚಟುವಟಿಕೆ ಮಾಡಿದಾಗ ಆರ್‌ಎಸ್‌ಎಸ್ ವಿರುದ್ಧ ಮಾತನಾಡಬೇಕಾಗುತ್ತೆ : ಬಿ.ಕೆ. ಹರಿಪ್ರಸಾದ್‌ – vishwanews24

ಭಾರತ್ ಜೋಡೋ ಸಂಘವನ್ನು ಸ್ಥಾಪಿಸಿ, ಎಲ್ಲ ಯುವಕರನ್ನು ಸೇರಿಸಿ, ಸರ್ಕಾರದಿಂದ ₹10 ಲಕ್ಷ ಅನುದಾನವನ್ನು ಪಡೆಯಬಹುದು. ಆ ಅನುದಾನವನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿಕೊಳ್ಳಬಹುದು ಎಂದು ತಿಳಿಸಿದರು. ಅಲ್ಲದೆ, ಗ್ಯಾರಂಟಿ ಯೋಜನೆಗಳು ಸಾರ್ವಜನಿಕರಿಗೆ ತಲುಪುವಂತೆ ನಮ್ಮ ಕಾರ್ಯಕರ್ತರು ಪ್ರಯತ್ನಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.ಕಾಂಗ್ರೆಸ್ ಪಕ್ಷದ ನಾಯಕ ಮುದರಂಗಡಿ ಡೇವಿಡ್ ಡಿಸೋಜಾ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಪು ಬ್ಲಾಕ್ ಅಧ್ಯಕ್ಷ ವೈ.ಸುಕುಮಾರ್, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಮೂಲ್ಯ, ದಿವಾಕರ್ ಶೆಟ್ಟಿ ಮಲ್ಲಾರು, ನ್ಯಾಯವಾದಿ ರೋಹನ್ ಕುಮಾರ್ ಕುತ್ಯಾರು, ರಿಯಾಜ್ ಮದರಂಗಡಿ, ಕಾಂಗ್ರೆಸ್ ಉಸ್ತುವಾರಿ ರತನ್ ಶೆಟ್ಟಿ ಶಿರ್ವ, ಜಾನ್ಸನ್ ಕರ್ಕಡ, ಆಲ್ವಿನ್ ಡಿಸೋಜಾ ಕುತ್ಯಾರು, ಕೃಷ್ಣ ಮೂಲ್ಯ ಕುತ್ಯಾರು, ಮುದ್ದು ಆಚಾರ್ಯ ಕುತ್ಯಾರು, ಅಜಿತ್ ಪೂಜಾರಿ ಕುತ್ಯಾರು, ಲಕ್ಷ್ಮಣ್ ಪೂಜಾರಿ ಕುತ್ಯಾರು, ಸಂದೀಪ್ ಪೂಜಾರಿ ಕುತ್ಯಾರು, ವಿನೋದ್ ಕುತ್ಯಾರು, ಕುಮಾರಿ ಪ್ರಜ್ಞಾ, ಲಕ್ಷ್ಮಿ ಪೂಜಾರಿ ಕುತ್ಯಾರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಕುಂದಾಪುರ: ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡಿದ್ದ ದೋಣಿ – ನಾಲ್ವರು ಮೀನುಗಾರರ ರಕ್ಷಣೆ – vishwanews24

Leave a Reply