ಕಾಪು: ಮದ್ಯಪಾನ ಮಾಡಿ ಹೆದ್ದಾರಿಯಲ್ಲಿ ಮಲಗಿದ್ದ ವ್ಯಕ್ತಿಯನ್ನು ಉಪಚರಿಸಿ ಮಾನವೀಯತೆ ಮೆರೆದ ಉಡುಪಿ ಡಿಸಿ ಮತ್ತು ಎಸ್‌ಪಿ – Vishwanews24

Featured, ಉಡುಪಿ

ಕಾಪು: ಮದ್ಯಪಾನ ಮಾಡಿ ಹೆದ್ದಾರಿಯಲ್ಲಿ ಮಲಗಿದ್ದ ವ್ಯಕ್ತಿಯನ್ನು ಉಪಚರಿಸಿ ಮಾನವೀಯತೆ ಮೆರೆದ ಉಡುಪಿ ಡಿಸಿ ಮತ್ತು ಎಸ್‌ಪಿ

ಕಾಪು: ಮದ್ಯಪಾನ ಮಾಡಿ ರಾ. ಹೆ. 66ರಲ್ಲಿ ಮಲಗಿದ್ದ ವ್ಯಕ್ತಿಯೋರ್ವನನ್ನು ಎಬ್ಬಿಸಿ, ಉಪಚರಿಸುವ ಮೂಲಕ ಉಡುಪಿ ಡಿಸಿ ಮತ್ತು ಎಸ್‌ಪಿ ಮಾನವೀಯತೆ ಮೆರೆದಿದ್ದಾರೆ.

ಉಡುಪಿ ಡಿಸಿ ಕೂರ್ಮಾ ರಾವ್‌ ಮತ್ತು ಎಸ್‌ಪಿ ಹಾಕೆ ಅಕ್ಷಯ್‌ ಮಚ್ಚೀಂದ್ರ ತಮ್ಮ ವಾಹನಗಳಲ್ಲಿ ಉಡುಪಿಯಿಂದ ಹೆಜಮಾಡಿ ಕಡೆಗೆ ತೆರಳುತ್ತಿದ್ದ ವೇಳೆ ಎರ್ಮಾಳು ಬಳಿ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬ ಮಲಗಿದ್ದನ್ನು ಗಮನಿಸಿದ್ದರು.

ವಾಹನ ನಿಲ್ಲಿಸಿ ಆತನ ಬಳಿಗೆ ಬಂದ ಅವರು ಎಬ್ಬಿಸಿ ಅಂಗರಕ್ಷಕ ಸಿಬಂದಿ ಮತ್ತು ಸ್ಥಳೀಯರ ಸಹಕಾರದೊಂದಿಗೆ ರಸ್ತೆ ಬದಿಗೆ ಕರೆ ತಂದು ಉಪಚರಿಸಿದರು. ಬಳಿಕ ಹೈವೇ ಪೆಟ್ರೋಲ್‌ ಪೊಲೀಸರ ಮೂಲಕ ಆತನ ಮನೆಯವರನ್ನು ಸಂಪರ್ಕಿಸಿ, ಕರೆದೊಯ್ಯುವ ವ್ಯವಸ್ಥೆ ಮಾಡಿದರು. ಈ ಮಾನವೀಯ ನಡೆ ಪ್ರಶಂಸೆಗೆ ಪಾತ್ರವಾಗಿದೆ.

ಮಂಗಳೂರು: ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ; ಸರ್ಕಾರಿ ಕಾರ್ಯಕ್ರಮಗಳಿಗೆ ಬ್ರೇಕ್  – ಕರಾವಳಿಯಾದ್ಯಂತ ಪೊಲೀಸ್‌ ಕಣ್ಗಾವಲು – VIshwanews24

Leave a Reply