ಕಾಪು : ಮಾ. 21 ಮತ್ತು 22 ರಂದು ಇತಿಹಾಸ ಪ್ರಸಿದ್ಧ ಕಾಪು ಸುಗ್ಗಿ ಮಾರಿಪೂಜೆ – ಮೂರು ಮಾರಿಗುಡಿಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ  – Vishwanews24

Featured, ಉಡುಪಿ

ಕಾಪು : ಮಾ. 21 ಮತ್ತು 22 ರಂದು ಇತಿಹಾಸ ಪ್ರಸಿದ್ಧ ಕಾಪು ಸುಗ್ಗಿ ಮಾರಿಪೂಜೆ – ಮೂರು ಮಾರಿಗುಡಿಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ

ಕಾಪು: ತುಳುನಾಡಿನ ಸಪ್ತಜಾತ್ರೆಗಳಲ್ಲಿ ಒಂದಾದ ಐತಿಹಾಸಿಕ ಹಿನ್ನೆಲೆ ಮತ್ತು ಪ್ರಸಿದ್ಧಿ ಪಡೆದಿರುವ ಕಾಪು ಮೂರು ಮಾರಿಗುಡಿಯಲ್ಲಿ ನಡೆಯುವ 2023 ನೇ ಸಾಲಿನ ಸುಗ್ಗಿಮಾರಿಪೂಜೆಯು ಮಾರ್ಚ್ 21-22 ರಂದು ನಡೆಯಲಿದೆ ಎಂದು ಹಳೆ-ಹೊಸ-ಕಲ್ಯಾ(ಮೂರನೇ) ಮಾರಿಗುಡಿಯ ಆಡಳಿತ ಸಮಿತಿಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಾರ್ಚ್ 14 ಮೀನ‌ ಸಂಕ್ರಾಮಣದಂದು ಕುರಿ ಬಿಡುವ ಸಂಪ್ರದಾಯ ನಡೆಯಲಿದ್ದು ಅದರ ಮುಂದಿನ ವಾರ ಸುಗ್ಗಿ ಮಾರಿಪೂಜೆ ನಡೆಯಲಿದೆ ಎಂದು ತಿಳಿಸಿದರು.

ಉಡುಪಿ :  ಮೆಹಂದಿ ಕಾರ್ಯಕ್ರಮದಲ್ಲಿ ಅವಧಿ ಮೀರಿ ಡಿ.ಜೆ ಸೌಂಡ್‌  :ಪೊಲೀಸ್ ದಾಳಿ – Vishawanews24

ಸುಗ್ಗಿ ಮಾರಿಪುಜೆಗೆ ತುಳುನಾಡು ಮಾತ್ರವಲ್ಲದೆ ಮಲೆನಾಡು -ಹೊರರಾಜ್ಯದ ಭಕ್ತರು ಕೂಡ ಈ ಜಾತ್ರೆಯ ಸಂದರ್ಭದಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ.

ಈ ಸಂದರ್ಭದಲ್ಲಿ ಕಾಪು ಹಳೆ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೆಸರ ಪ್ರಸಾದ್ ಶೆಣೈ, ಹೊಸಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೆಸರ ರಮೇಶ್ ಹೆಗ್ಡೆ,ಮೂರನೇ ಮಾರಿಗುಡಿಯ ಕಾರ್ಯನಿರ್ವಾಹಣಾಧಿಕಾರಿ ಸುಧಿರ್ ಕುಮಾರ್, ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.

ಉಡುಪಿ : ಜಿಲ್ಲೆಯಲ್ಲಿ  ಮಾರ್ಚ್ 1 ರಿಂದ ತುರ್ತು ಸೇವೆ ಹೊರತುಪಡಿಸಿ ಇತರೇ ಸರ್ಕಾರಿ ಸೇವೆ ಸ್ಥಗಿತ – Vishwanews24

Leave a Reply