ಕಾಪು ರವಿಶಂಕರ್ ಗುರೂಜಿ ಆನಂದಲಹರಿ ಕಾರ್ಯಕ್ರಮ ವಿಶೇಷ ಪ್ರಸಾದ ವಿತರಣೆಗೆ ವ್ಯವಸ್ಥೆ : ಕಡ್ಡಾಯವಾಗಿ ಸ್ಟೀಲ್ ಹಾಗೂ ಪೇಪರ್ ಗ್ಲಾಸ್ ನಲ್ಲಿ ಕುಡಿಯುವ ನೀರು ವಿತರಣೆ:vishwanews24
ಕಾಪು ರವಿಶಂಕರ್ ಗುರೂಜಿ ಆನಂದಲಹರಿ ಕಾರ್ಯಕ್ರಮ ವಿಶೇಷ ಪ್ರಸಾದ ವಿತರಣೆಗೆ ವ್ಯವಸ್ಥೆ : ಕಡ್ಡಾಯವಾಗಿ ಸ್ಟೀಲ್ ಹಾಗೂ ಪೇಪರ್ ಗ್ಲಾಸ್ ನಲ್ಲಿ ಕುಡಿಯುವ ನೀರು ವಿತರಣೆ:vishwanews24
ಕಾಪು: ರವಿಶಂಕರ್ ಗುರೂಜಿಯವರ ಕಾರ್ಯಕ್ರಮದ ಸಂಪೂರ್ಣ ಸಿದ್ಧತೆ ಪೂರ್ಣಗೊಂಡಿದ್ದು ಇಂದು ರಾತ್ರಿ ಕಾಪುವಿನ ಮಂಥನ್ ರೆಸಾರ್ಟಿಗೆ ಆಗಮಿಸಿ ರಾತ್ರಿ ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ.
ನಾಳೆ ಬೆಳಗ್ಗೆ 9:30 ಗಂಟೆಗೆ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸವನ್ನ ವೀಕ್ಷಿಸಲಿದ್ದಾರೆ.
ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನೀರಿಕ್ಷೆ ಇದ್ದು ಮಂಥನ್ ಬಿ ರೆಸಾರ್ಟ್ ಬಳಿ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಬೃಹತ್ ವೇದಿಕೆ ಸಿದ್ಧಗೊಂಡಿದೆ ಸತ್ಸಂಗದಲ್ಲೇ ಪಾಲ್ಗೊಳ್ಳುವ ಭಕ್ತರಿಗೆ ಆಯೋಜಕರ ವತಿಯಿಂದ ಬೆಲ್ಲ ಬಳಸಿಕೊಂಡು ಶೀರಾ ಅವಲಕ್ಕಿ ಮತ್ತು ಕಡಲೆ ಬಳಸಿಕೊಂಡು ವಿಶೇಷ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದ್ದು ಆಗಮಿಸುವ ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ಪ್ಲಾಸ್ಟಿಕ್ ರಹಿತವಾಗಿ ಸ್ಟೀಲ್ ಲೋಟ ಮತ್ತು ಪೇಪರ್ ಲೋಟದಲ್ಲಿ ವಿತರಿಸಲಾಗುತ್ತದೆ.
ಆನಂದ ಲಹರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರ ಅನುಕೂಲಕ್ಕಾಗಿ ಮೂಳೂರು ಸಾಯಿರಾಧಾ ಹೆರಿಟೇಜ್ ಬಳಿ, ಕಾಪು ಓಶಿಯನ್ ಬೀಚ್ ರೆಸಾರ್ಟ್ ಬಳಿ, ಕಾಪು ಪಡು ಸರಕಾರಿ ಶಾಲೆ ಬಳಿ, ಮಂಥನ್ ಬೀಚ್ ರೆಸಾರ್ಟ್ ಬಳಿಯ ನಾಲ್ಕು ಕಡೆಗಳಲ್ಲಿ ಸೂಕ್ತ ರೀತಿಯ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮ ಸಂಯೋಜಕರಾದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಸಹೋದರರಾದ ಹರೀಶ್ ಪಿ. ಶೆಟ್ಟಿ ಗುರ್ಮೆ, ಸತೀಶ್ ಪಿ. ಶೆಟ್ಟಿ ಗುರ್ಮೆ ನೇತೃತ್ವದಲ್ಲಿ ಎಲ್ಲಾ ಸಮಾಜ ಬಾಂಧವರು ಮತ್ತು ಆರ್ಟ್ ಆಫ್ ಲೀವಿಂಗ್ ಬಳಗದವರ ನೇತೃತ್ವದಲ್ಲಿ ಕಾರ್ಯಕ್ರಮದ ಪೂರ್ವ ತಯಾರಿಗಳು ಪೂರ್ಣಗೊಂಡಿವೆ.


