ಕಾಪು : ಲೀಲಾಧರ ಶೆಟ್ಟಿಯವರು ನಮ್ಮನ್ನು ಆಗಲಿ ವರ್ಷವಾದರೂ ಅವರು ಮಾಡಿದ ಸಮಾಜ ಸೇವೆ ನಿತ್ಯ ನಿರಂತರ : ಮನೋಹರ ಎಸ್ ಶೆಟ್ಟಿ – vishwanews24

Featured, ಉಡುಪಿ

ಕಾಪು: ದಿ. ಲೀಲಾಧರ ಶೆಟ್ಟಿ ಸ್ಮರಣಾರ್ಥವಾಗಿ ನಡೆದ ರಕ್ತದಾನ ಶಿಬಿರ ಬೃಹತ್

ಕಾಪು: ಸಮಾಜ ಸೇವಕ ದಿ. ಲೀಲಾಧರ ಶೆಟ್ಟಿ ಮತ್ತು ವಸುಂದರಾ ಶೆಟ್ಟಿ ಅವರ ಸ್ಮರಣಾರ್ಥ ಗುರುವಾರ ಕಾಪು ಶ್ರೀವೀರಭದ್ರ ಸಭಾಭವನದಲ್ಲಿ ರಕ್ತದಾನ ಶಿಬಿರ ನೆರವೇರಿತು.

ಮುಳುಗು ತಜ್ಞ ಅಶೋಕ್ ಶೆಟ್ಟಿ ದೆಂದೂರು ದಂಪತಿ ಹಾಗೂ ಕಾಪು ಪುರಸಭೆ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. 110 ಯುನಿಟ್ ರಕ್ತ ಸಂಗ್ರಹಿಸಲಾಯಿತು. ದಿ. ಲೀಲಾಧರ ಶೆಟ್ಟಿ ದಂಪತಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಕೇರಳ : ಭೀಕರ ರಸ್ತೆ ಅಪಘಾತ – ಬಸ್‌ಗಾಗಿ ಕಾಯುತ್ತಿದ್ದಾಗ ಲಾರಿ ಹರಿದು ನಾಲ್ವರು ವಿದ್ಯಾರ್ಥಿನಿಯರು ಮೃತ್ಯು – vishwanews24

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಪು ಶ್ರೀಲಕ್ಷ್ಮೀ ಜನಾರ್ದನ ದೇಗುಲದ ಮೊಕ್ತಸರ ಮನೋಹರ ಎಸ್ ಶೆಟ್ಟಿ, ‘ಲೀಲಾಧರ ಶೆಟ್ಟಿಯವರು ನಮ್ಮನ್ನು ಆಗಲಿ ಒಂದು ವರ್ಷವಾದರೂ ಅವರು ಮಾಡಿದ ಸಮಾಜ ಸೇವೆ ನಿತ್ಯ ನಿರಂತರ’ ಎಂದರು.

ಕಾಪು ತಹಶೀಲ್ದಾರ್ ಪ್ರತಿಭಾ ಆರ್ ಮಾತನಾಡಿ, ‘ಸಮಾಜ ಸೇವಕ ದಿ. ಲೀಲಾಧರ ಶೆಟ್ಟಿ ಅವರ ಸಾಮಾಜಿಕ ಸೇವೆ, ರಕ್ತದಾನ ಶಿಬಿರ, ಅಶಕ್ರು-ಶಾಲಾ ಮಕ್ಕಳಿಗೆ ನೀಡಿದ ಸಹಾಯ ಎಂದೂ ಮರೆಯಲಾಗದು’ ಎಂದರು.

ಮಾಜಿ ಶಾಸಕ ಲಾಲಾಜಿ ಆರ್್ರ ಮೆಂಡನ್‌, ಪುರಸಭಾಧ್ಯಕ್ಷೆ ಕುಮಾರಿ ಹರಿನಾಕ್ಷಿ ದೇವಾಡಿಗ, ಶ್ರೀಧರ್ ಶೆಟ್ಟಿ ಮುಲುಂಡ್, ಯೋಗೇಶ್‌ ಶೆಟ್ಟಿ, ಜಯಲಕ್ಷ್ಮಿಸುರೇಶ್ ಶೆಟ್ಟಿ, ಪ್ರಭಾಕರ್ ಪೂಜಾರಿ, ಡಾ. ವೀಣಾ ಕುಮಾರಿ, ಡಾ. ರಾಜಶ್ರೀ ಕಿಣಿ, ಮೋಹನ್‌ ದಾಸ್ ಶೆಟ್ಟಿ ಕರಂದಾಡಿ, ಕುತ್ಯಾರು ಪ್ರಸಾದ್ ಶೆಟ್ಟಿ, ರಮೇಶ್ ಶೆಟ್ಟಿ ಜಾರ್ಕಳ ಇದ್ದರು.

ಉಡುಪಿ: ರಾಜ್ಯ ಸರಕಾರದ ಗ್ಯಾರಂಟಿಗಳನ್ನು ಅರ್ಹರಿಗೆ ತಲುಪಿಸಿ : ಅಧಿಕಾರಿಗಳಿಗೆ ರಮೇಶ್‌ ಕಾಂಚನ್‌ ಸೂಚಿಸಿದ್ದ ಸೂಚನೆ – vishwanews24

Leave a Reply