ಕಾಪು : ಶಂಕರಪುರ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮಾ ಉತ್ಸವ ಸಂಪನ್ನ -Vishwanews24
ಕಾಪು : ಶಂಕರಪುರ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮಾ ಉತ್ಸವ ಸಂಪನ್ನ -Vishwanews24
ಕಾಪು : ಶಂಕರಪುರ ದ್ವಾರಕಾಮಯಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ವಿಶೇಷ ಪೂಜಾ ವಿಧಿವಿಧಾನ ಸಂಪನ್ನಗೊಂಡಿತು.
ಈ ಸಂದರ್ಭ ಮಂದಿರದಲ್ಲಿ ವಿಶೇಷ ಪೂಜಾದಿ ಕಾರ್ಯಗಳು ಸೇರಿದಂತೆ ವಿವಿಧ ಭಜನಾ ಮಂಡಗಳಿಂದ ಭಜನಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭ ದೇವಳದ ಪ್ರಧಾನರಾದ ಸಾಯಿ ಈಶ್ವರ್ ಮಾತನಾಡಿ, ಆಷಾಡ ಮಾಸದಲ್ಲಿ ವಿಶೇಷವಾಗಿ ಗುರುಪೂರ್ಣಿಮೆಯಂದು ಗುರುಗಳನ್ನು ಪೂಜಿಸುವುದರಿಂದ ಜೀವನದಲ್ಲಿ ಯಶಸ್ಸನ್ನು ಕಾಣುತ್ತೇವೆ ಎಂಬ ಪ್ರತೀತಿ ಇದೆ. ನಮ್ಮ ದ್ವಾರಕಾಮಯಿ ದೇವಳದಲ್ಲಿ ಮೂರು ದಿನಗಳ ಕಾಲ ಪೂರ್ಣಿಮಾ ಉತ್ಸವ ಆಚರಿಸುತ್ತಿದ್ದೇವೆ ಎಂದು ಗುರೂಜಿ ಸಾಯಿ ಈಶ್ವರ್ ಹೇಳಿದ್ದಾರೆ. ಈ ಸಂದರ್ಭ ದೇವಳದ ಪ್ರಧಾನ ಟ್ರಸ್ಟಿ ವಿಶ್ವನಾಥ ಸುವರ್ಣ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.
