ಕಾಪು ಸುಗ್ಗಿ ಮಾರಿಪೂಜೆ ಸಂಭ್ರಮ ವಿದ್ಯುತ್‍ದೀಪಗಳಿಂದ ಕಂಗೋಳಿಸುತ್ತಿರುವ ಮೂರು ಮಾರಿಗುಡಿ.

Featured, ಉಡುಪಿ

ಕಾಪು :ತುಳುನಾಡಿನ ಪ್ರಸಿದ್ಧ ಏಳು ಜಾತ್ರೆಗಳಲ್ಲಿ ಒಂದಾಗಿರುವ ಕಾಪುವಿನ ಸುಗ್ಗಿ ಮಾರಿ ಪೂಜಾ ಕಾರ್ಯಕ್ರಮಕ್ಕೆ ಕಾಪು ಶೃಂಗಾರಗೊಂಡಿದೆ.                                                    (ಚಿತ್ರ : ರೂಪಂ ಕಾಪು)

                  
ಪುರಾಣ ಪ್ರಸಿದ್ಧವಾಗಿರುವ 3 ಮಾರಿಗುಡಿಗಳು ವಿದ್ಯುತ್ ದೀಪಾಲಂಕಾರ ಹಾಗೂ ಪುಷ್ಪಾಲಂಕಾರದೊಂದಿಗೆ ಕಂಗೋಳಿಸುತ್ತಿದೆ.

ಕಾಪು ಶ್ರೀ ಹಳೆ ಮಾರಿಗುಡಿ, ಶ್ರೀ ಹೊಸ ಮಾರಿಗುಡಿ, ಶ್ರೀ ಮೂರನೇ ಮಾರಿಗುಡಿ ಗೆ ರಾಜ್ಯದ ವಿವಿಧ ಕಡೆಯಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆಗಳನ್ನ ಜೋಡಿಸಲಾಗಿದೆ. ವಿಶೇಷವಾಗಿ ಸುಗ್ಗಿ ಮಾರಿಪೂಜೆಗೆ ಊರ ಪರವೂರ ಭಕ್ತರು ಮಾತ್ರವಲ್ಲದೆ ದೂರದ ವಿದೇಶದಿಂದ ಲಕ್ಷಾಂತರ ಜನ ಭಾಗವಹಿಸುತ್ತಾರೆ.
ಕೋಳಿ,ಕುರಿ,ಆಡುಗಳ ಮಾರಾm ಜೋರಾಗಿವುದರಿಂದ ನೂರಾರು ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿವೆ.

ಮೂರು ಮಾರಿಗುಡಿಯ ಸುತ್ತಲೂ ಸ್ವಚ್ಛತೆಯನ್ನ ಕಾಪಾಡು ನಿಟ್ಟಿನಲ್ಲಿ ಮುಖ್ಯಾಧಿಕಾರಿ ರಾಯಪ್ಪನವರ ನೇತೃತ್ವದಲ್ಲಿ ಅರಿವೂ ಮೂಡಿಸುವ ಪ್ರಯತ್ನವೂ ಜೋರಾಗಿದೆ.