ಕಾಪು ಸುಗ್ಗಿ ಮಾರಿಪೂಜೆ ಹಳೆ ಮಾರಿಯಮ್ಮ ದೇಗುಲದ ಪತ್ರಿಕಾ ಪ್ರಕಟಣೆ -Vishwanews24
ಕಾಪು ಸುಗ್ಗಿ ಮಾರಿಪೂಜೆ ಹಳೆ ಮಾರಿಯಮ್ಮ ದೇಗುಲದ ಪತ್ರಿಕಾ ಪ್ರಕಟಣೆ.
ಕಾಪು: ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದಲ್ಲಿ ತಾರೀಖು 24 ಮತ್ತು 25 ರಂದು ನಡೆಯುವ ಸುಗ್ಗಿ ಮಾರಿಪೂಜೆಯನ್ನು ಕೋವಿಡ್ 19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತದ ಆದೇಶದಂತೆ ಧಾರ್ಮಿಕ ಸ್ಥಳದಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಭಕ್ತರು ಸಹಕರಿಸಬೇಕೆಂದು ವಿನಂತಿ ಮಾಡಿದ್ದಾರೆ.
ಹರಕೆ ರೂಪದಲ್ಲಿ ಸೇವೆ ಸಲ್ಲಿಸುವ ಭಕ್ತರು ಆಟಿ (ಆಷಾಢ) ಮಾರಿಪೂಜೆಯಂದು ಸೇವೆಯನ್ನ ಸಲ್ಲಿಸಬೇಕಾಗಿ ಆಡಳಿತ ಮಂಡಳಿ ವಿನಂತಿಸಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿರ್ಣಯವನ್ನು ಮಾಡಲಾಗಿದ್ದು ಭಕ್ತರ ಪರವಾಗಿ ಉತ್ತಮ ಆರೋಗ್ಯ ಹಾಗೂ ಇಷ್ಟಾರ್ಥ ಪ್ರಾಪ್ತಿಗಾಗಿ ಆಡಳಿತ ಮಂಡಳಿ ,ಕಾಪು ಪೇಟೆಯ ಹತ್ತು ಸಮಸ್ತರು,ಅರ್ಚಕರು,ನೌಕರರು ಶ್ರೀ ದೇವಿ ಹಳೆ ಮಾರಿಯಮ್ಮನಲ್ಲಿ ಸಲ್ಲಿಸಿದ್ದಾರೆಂದು ಆಡಳಿತ ಮಂಡಳಿ ಪರವಾಗಿ ದೇಗುಲದ ಆಡಳಿತ ಮೊಕ್ತೆಸರರು ಪ್ರಸಾದ್ ಜಿ ಶೆಣೈ ಪತ್ರಿಕಾಪ್ರಕಟನೆಯಲ್ಲಿ ತಿಳಿಸಿದ್ದಾರೆ.

